ಹೊಸ ಸಚಿವರು ಈಗಲೂ ಅನರ್ಹರೇ : ಸಿದ್ದರಾಮಯ್ಯ ಟ್ವಿಟ್ ಮಾಡಿದ್ದೇನು?
ಬಹುದಿನಗಳಿಂದ ಕುತೂಹಲ ಕೆರಳಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಿದೆ. ಬೈ ಎಲೆಕ್ಷನ್ ನಲ್ಲಿ ಗೆದ್ದ 10 ಜನರನ್ನು ಮಂತ್ರಿ ಮಾಡಲಾಗಿದೆ. ನೂತನ ಮಂತ್ರಿಗಳು ಈಗಲೂ ಅನರ್ಹರೇ ಆಗಿದ್ದಾರೆ ಅಂತ ಮಾಜಿ ಸಿಎಂ ಟೀಕೆ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ.
ಮಾಡಿದುಣ್ಣೋ ಮಹರಾಯ ಅಂತಾನೂ ಸಿದ್ದರಾಮಯ್ಯ ಟ್ವಿಟ್ ಮಾಡೋ ಮೂಲಕ ತಿವಿದಿದ್ದಾರೆ.