ಮಹಿಳಾ ಪೊಲೀಸ್ ರಿಗೆ ಹೊಸ ಸ್ಕೂಟರ್ ಭಾಗ್ಯ

ಶನಿವಾರ, 27 ಜೂನ್ 2020 (16:14 IST)
ಮಹಿಳಾ ಪೊಲೀಸ್ ರಿಗೆ ಹೊಸ ಸ್ಕೂಟರ್ ಗಳ ಭಾಗ್ಯ ಲಭಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ನಿಯೋಜನೆಗೊಂಡಿರುವ ಶರಾವತಿ ಮಹಿಳಾ ಪೊಲೀಸ್  ಪಡೆಯ 25 ಮಹಿಳಾ ಸಿಬ್ಬಂದಿಗಳಿಗೆ ಸ್ಕೂಟರ್‌ಗಳನ್ನು ಉತ್ತರಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ವಿತರಿಸಿದರು.
ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಥಳಕ್ಕೆ ತೆರಳಿ ಸಂಭವನೀಯ ಅಪರಾಧವನ್ನು ತಪ್ಪಿಸಲು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಶರಾವತಿ ಪಡೆಗೆ ಇದರಿಂದ ಅನುಕೂಲವಾಗಲಿದೆ.

ಶರಾವತಿ ಪಡೆಯ ಸಿಬ್ಬಂದಿಗಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಸೈಬರ್ ಅಪರಾಧ ಹಾಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ.

ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜುಗಳ ಸ್ಥಳಗಳಲ್ಲಿ ಗಸ್ತು ನಡೆಸಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ