ತಿಮ್ಮಪ್ಪನಿಗೆ ಪೆದ್ದ ಶೇಷ ವಾಹನ ಸೇವೆ
ಆಂದ್ರಪ್ರದೇಶದ ತಿರುಮಲ ದೇವಸ್ಥಾನದಲ್ಲಿ ನಡೆಯುತ್ತಿರುವ ಪೆದ್ದ ಶೇಷ ವಾಹನ ಸೇವೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಅಲ್ಲಿ ದೇವರು ಮಲಯಪ್ಪ ಮತ್ತು ಅವರ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯನ್ನು ಏಳು ಹೆಡೆಯ ಸರ್ಪವಾದ ಪೆದ್ದ ಶೇಷ ವಾಹನದ ಮೇಲೆ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ, ದೇವರ ಕೃಪೆಗೆ ಪಾರ್ತರಾದರು. ಭಗವಂತನ ಅಕ್ಕ-ಪಕ್ಕದಲ್ಲಿ ತನ್ನ ಇಬ್ಬರು ದೈವಿಕ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯಿಂದ ಸುತ್ತುವರೆದಿದ್ದಾರೆ. ಇಬ್ಬರ ಮಧ್ಯದಲ್ಲಿ ತಿಮ್ಮಪ್ಪ ಕುಳಿತು ಸವಾರಿ ಮಾಡುತ್ತಾನೆ. ಮೂವರಿಗೆ ಓಳು ಹೆಡೆಗಳ ಸರ್ಪ ಕವಚವಾಗಿದ್ದು, ಇದು ವೆಂಕಟೇಶ್ವರನ ಏಳು ಬೆಟ್ಟಗಳನ್ನು ಪ್ರತಿನಿಧಿಸುತ್ತವೆ.