ಮನೆಗಳ್ಳತನ ತಡೆಗಾಗಿ ಹೈಟೆಕ್ ತಂತ್ರಕ್ಕೆ ಪೊಲೀಸರ ಮೊರೆ

ಭಾನುವಾರ, 9 ಆಗಸ್ಟ್ 2020 (19:38 IST)
ರಾಜ್ಯದಲ್ಲಿ ಮೊದಲ ಬಾರಿಗೆ ಮನೆಗಳ್ಳತನ ತಡೆಗೆ ಪೊಲೀಸರು ಹೈಟೆಕ್ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಇನ್ಮುಂದೆ ಕೇವಲ ಒಂದು ಮೊಬೈಲ್ ಅಪ್ಲಿಕೇಶನ್ ನಲ್ಲಿ ಜನರು ತಮ್ಮ ಮನೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಬಹುದು. ಅಂಥದ್ದೊಂದು ಮೊಬೈಲ್ ಆ್ಯಪ್ ಅನ್ನು ತುಮಕೂರು ಪೊಲೀಸರು ಜನರ ಸೇವೆಗೆ ಒದಗಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತುಮಕೂರು ಪೊಲೀಸರು ಇಂತಹ ಪ್ರಯೋಗವನ್ನು ಮಾಡಿದ್ದು, ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ತಡೆಯಲು ಜಿಲ್ಲಾ ಪೊಲೀಸರಿಂದ ಎಲ್‌ಎಚ್‌ಎಂಎಸ್ (Locked house monitoring system) ಆ್ಯಪ್ ಮೂಲಕ ಜಾರಿಗೆ ತಂದಿದೆ.

ಮನೆಯಿಂದ ಹೊರಗೆ ಹೋಗುವರು ಈ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡರೆ, ಪೊಲೀಸರು ಮನೆಯನ್ನು ತಂತ್ರಜ್ಞಾನದ ಸಹಾಯದಿಂದ ನಿಗಾವಹಿಸಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ