ಬೆಂಗಳೂರು ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿ ಹಾಗೂ ಟಿಕೇಟ್ ದರ ಬಿಡುಗಡೆ ಮಾಡಿದೆ.ಮೊನ್ನೆ ಪ್ರಧಾನಿ ಮೋದಿ ಕೊಯಮತ್ತೂರು ಬೆಂಗಳೂರು ರೈಲಿಗೆ ಚಾಲನೆ ನೀಡಿದ್ರು .ಆದ್ರೆ ಸಮಯ ಮತ್ತು ಯಾವುದೇ ಪ್ರಯಾಣದದರ ನಿಗದಿ ಮಾಡಿರಲಿಲ್ಲ .ತಿರುಪುರ್, ಈರೋಡ್, ಧರ್ಮಪುರಿ ಮತ್ತು ಹೊಸೂರ್‌ನಲ್ಲಿ ಈ ರೈಲು ನಿಲುಗಡೆ ಹೊಂದಿದೆ.
.ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30ರಂದು ಹಸಿರು ನಿಶಾನೆ ತೋರಿದ್ದರು.ಕೊಯಮತ್ತೂರು ನಿಂದ ಹೊರಟು ಬೆಂಗಳೂರಿನ ಕಂಟೂನ್ ಮೆಂಟ್ ರೈಲು ನಿಲ್ದಾಣ ತಲುಪಲಿದೆ .ಕೊಯಮತ್ತೂರು ಇಂದ ಬೆಳಗ್ಗೆ 5 : 30ಕ್ಕೆ ಹೊರಟು ಬೆಂಗಳೂರಿನ ಕಂಟೋನ್ಮೆಂಟ್‌ಗೆ ಮದ್ಯಾನ 11.30 ಕ್ಕೆ ತಲುಪುತ್ತದೆ.ಬೆಂಗಳೂರನಿಂದ ಮದ್ಯಾನ 1 : 40ಕ್ಕೆ ಹೊರಟು ರಾತ್ರಿ 8 ಗಂಟೆಗೆ ಕೊಯಮತ್ತೂರು ತಲುಪಲಿದೆ.ಕೊಯಮಾತ್ತೂರಿನಿಂದ ಬೆಂಗಳೂರಿಗೆ 403 ಕಿ. ಮೀ ಇದ್ದು ಆರು ಗಂಟೆಯಲ್ಲಿ ಕ್ರಮಿಸಬಹುದಾಗಿದೆ.
ಇನ್ನು ಕೊಯಮಾತ್ತೂರಿನಿಂದ ಬೆಂಗಳೂರಿಗೆ ಸಾಮಾನ್ಯ ಸಿಟ್ ಗಳಿಗೆ 940 ರೂಪಾಯಿ ನಿಗದಿ ಪಡಿಸಲಾಗಿದೆ ಹಾಗೆ ಎಕ್ಸಿಕ್ಯೂಟಿವ್ ಎಸಿ ಚೇರ್ ಗಳಿಗೆ 1,860 ರೂಪಾಯಿ ನಿಗದಿ ಮಾಡಲಾಗಿದೆ.ಈ ಒಂದೇ ಭಾರತ್ ರೈಲು ಬೆಂಗಳೂರು ಹಾಗೂ ಕೊಯಮಾತ್ತೂರ ನಡುವೆ ದಿನಾಲೂ ಸಂಚಾರಿಸಲಿದೆ.