ಪತ್ನಿಗೆ ರೀಲ್ಸ್‌, ಮೊಬೈಲ್ ಹುಚ್ಚು, ಇದನ್ನು ಸಹಿಸಕ್ಕಾಗದ ಪತಿ ಮಾಡಿದ್ದೇನು ಗೊತ್ತಾ

Sampriya

ಶುಕ್ರವಾರ, 23 ಆಗಸ್ಟ್ 2024 (15:21 IST)
ಉಡುಪಿ: ಪತ್ನಿಯ ಅತಿಯಾದ ರೀಲ್ಸ್‌ ಮತ್ತು ಮೊಬೈಲ್ ಹುಚ್ಚಾಟಕ್ಕೆ ಕೋಪಗೊಂಡ ಪತಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿಯ, ಬ್ರಹ್ಮವರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ.

ಪತಿ ಕಿರಣ್ ಉಪಾಧ್ಯ, ಪತ್ನಿ ಜಯಶ್ರೀ(31)ಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಈ ದಂಪತಿ ಇಲ್ಲಿನ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಿರಣ್ ಉಪಾಧ್ಯ ಇಲ್ಲಿನ ದೇವಸ್ಥಾನವೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದ. ಮೃತ ಜಯಶ್ರೀ ಬೀದರ್ ಮೂಲದವಳಾಗಿದ್ದರು.

ಹತ್ಯೆಯಾದ ಜಯಶ್ರೀ ಯಾವಾಗಲೂ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದರಂತೆ. ಅದಲ್ಲದೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರಂತೆ. ಮೊಬೈಲ್ ಬಳಕೆ ವಿಚಾರವಾಗಿ ಪತಿ ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿದ್ದಂತೆ. ಇದೀಗ ಇಬ್ಬರ ಜಗಳ ಒಬ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ.

ಹೆಂಡತಿಯ ಹತ್ಯೆ ಮಾಡಿ ಮನೆಯಲ್ಲೇ ಕೂತಿದ್ದ ಪತಿ ಕಿರಣ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ