‘ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಿಲ್ಲ’

ಶುಕ್ರವಾರ, 12 ಜುಲೈ 2019 (16:33 IST)
ದೋಸ್ತಿ ಸರಕಾರದಲ್ಲಿ ಬಂಡಾಯವೆದ್ದ ಶಾಸಕರ ರಾಜೀನಾಮೆ ಅಂಗೀಕಾರ ಆಗೋಕೆ ಸಾಧ್ಯವಿಲ್ಲ. ಸ್ಪೀಕರ್ ರಾಜೀನಾಮೆಗಳನ್ನು ಅಂಗೀಕಾರ ಮಾಡೋಕೆ ಛಾನ್ಸೆ ಇಲ್ಲ ಅಂತ ಇವರು ಹೇಳಿದ್ದಾರೆ.

ಯಾವ ಕಾರಣಕ್ಕೆ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದನ್ನು ಸಮಗ್ರವಾಗಿ ವಿಚಾರಿಸಿ ಸ್ಪೀಕರ್ ರಾಜೀನಾಮೆ ಅಂಗೀಕರಿಸಬೇಕಾಗುತ್ತದೆ.

ಶಾಸಕರು ಈಗ ನೀಡಿರೋ ಕಾರಣ ಸೂಕ್ತವಾಗಿಲ್ಲ. ಹೀಗಾಗಿ ಸ್ಪೀಕರ್ ಅವರು ಅತೃಪ್ತ ಶಾಸಕರ ರಾಜೀನಾಮೆಯನ್ನು ತಿರಸ್ಕಾರ ಮಾಡುತ್ತಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾನೂನು ಪ್ರಕಾರವಾಗಿ ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ. ಸುಪ್ರೀಂಕೋರ್ಟ್ ಈ ವಿಷಯದಲ್ಲಿ ನಡುವೆ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ