ಕಂಠೀರವ ಸ್ಟೇಡಿಯಂ ಗೆ ಕನೆಕ್ಟ್ ಆಗೋ ರಸ್ತೆ ಮಾರ್ಗ ಬದಲಾವಣೆ

ಶುಕ್ರವಾರ, 19 ಮೇ 2023 (19:40 IST)
ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆ ಸ್ಟೇಡಿಯಂ ಸುತ್ತಾ ಮುತ್ತಾ ಸಂಚಾರ ದಟ್ಟಣೆ ಸಾಧ್ಯತೆ ಇದೆ.ಹೀಗಾಗಿ ಕಂಠೀರವ ಸ್ಟೇಡಿಯಂ ಗೆ ಕನೆಕ್ಟ್ ಆಗೋ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ.ಸಂಚಾರಿ ಪೊಲೀಸರಿಂದ ಮಾರ್ಗಸೂಚಿ ಆದೇಶ ಹೊರಡಿಸಲಾಗಿದೆ.ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಸಂಚರಿಸದಂತೆ ಸೂಚನೆ ನೀಡಲಾಗಿದೆ.
 
ಕಾರ್ಯಕ್ರಮಕ್ಕೆ ಬರೋ ವಿವಿಐಪಿ, ವಿಐಪಿಗಳ  ವಾಹನಗಳಿಗೆ ಸೆಂಟ್ ಜೋಸೆಫ್‌ ಕಾಲೇಜ್‌ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಅಧಿಕಾರಿಗಳು, ಸಿಬ್ಬಂದಿಗೆ ಪಾರ್ಕಿಂಗ್ ವ್ಯವಸ್ಥೆಯನ್ನ  ಬಿಬಿಎಂಪಿ ಮುಖ್ಯ ಕಛೇರಿ ಆವರಣ, ಬದಾಮಿ ಹೌಸ್,ಕೆ.ಜಿ. ರಸ್ತೆಯ ಎಡ ಬದಿಯಲ್ಲಿ ಹಾಗೂ ಯುನೈಟೆಡ್ ಮಿಷನ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ
 
ಹಾಗಾದ್ರೆ ಯಾವ್ಯಾವ ಮಾರ್ಗದಲ್ಲಿ ಸಂಚಾರಕ್ಕೆ ಬ್ರೇಕ್..?
 
1) ಕ್ವೀನ್ಸ್ ವೃತ್ತದ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಭಂಧ..
 
 ಕ್ವೀನ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಲ್ಯಾವಲ್ಲಿ ರಸ್ತೆ ಅಥವಾ ಕ್ವಿನ್ಸ್ ರಸ್ತೆಯ ಮೂಲಕ ಸಂಚಾರಕ್ಕೆ ಸೂಚನೆ..
 
2) ಬಾಳೇಕುಂದ್ರಿ ವೃತ್ತದಿಂದ ಕ್ವೀನ್ ವೃತ್ತದ ಕಡೆಗೆ ತೆರಳುವ ವಾಹನಗಳು- ಪಟ್ಟಾ ಜಂಕ್ಷನ್ ನಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ದೈವರ್ಷನ್ ಮಾಡುವುದರಿಂದ ಬಿಎಂಟಿಸಿ ಹಾಗು ಇತರೆ ವಾಹನಗಳು ಪೊಲೀಸ್‌ ತಿಮ್ಮಯ್ಯ ವೃತ್ತದಲ್ಲಿ ತಿರುವು ಪಡೆದು ಸಂಚಾರಕ್ಕೆ ಸೂಚನೆ..
 
3) ಸಿಟಿಓ ವೃತ್ತದಿಂದ ಕ್ವೀನ್ ವೃತ್ತದ ಕಡೆಗೆ ವಾಹನಗಳ ಸಂಚಾರ ನಿರ್ಭಂಧ..
 
ಕಬ್ಬನ್ ರಸ್ತೆಯ ಮುಖೇನ ಅನಿಲ್ ಕುಂಬ್ಳೆ ವೃತ್ತದ ಕಥೆಗೆ ಅಥವಾ ಮಣಿಪಾಲ್‌ ಸೆಂಟರ್ ಕಡೆಗೆ ಸಂಚಾರಕ್ಕೆ ಅನುಕೂಲ
 
4)ಹಲಸೂರು ಗೇಟ್ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ..
 
 
ಈ ಕೆಳಗಿನ ರಸ್ತೆ ಅಕ್ಕ ಪಕ್ಕ ಪಾರ್ಕಿಂಗ್ ಗೆ ನಿರ್ಬಂಧ..
 
ಆರ್.ಆರ್.ಎಂ.ಆರ್ ರಸ್ತೆ ಹಾಗು ಕಸ್ತೂರ್ಬಾ ರಸ್ತೆ, 
 
ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಗೆ ನಿರ್ಬಂಧ..
 
ಹಾಗಾದ್ರೆ ಕಾರ್ಯಕ್ರಮಕ್ಕೆ ಬರೋರಿಗೆ ಎಂಟ್ರಿ ಹೇಗೆ..?
 
ವಿವಿಐಪಿ, ವಿವಿಐಪಿಗಳಿಗೆ ವಾಹನದಿಂದ ಇಳಿದ ನಂತರ ಕೆ.ಬಿ. ರಸ್ತೆ, ತಮ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯ ಗೇಟ್‌ ಗಳ ಮೂಲಕ ಪ್ರವೇಶಕ್ಕೆ ಅವಕಾಶ..
 
ಸಾರ್ವಜನಿಕರ ಎಂಟ್ರಿ, ಪಾರ್ಕಿಂಗ್  ವ್ಯವಸ್ಥೆ ಹೇಗೆ..?
 
ಕೆಜಿ ರಸ್ತೆಯ ಎಸ್.ಬಿ.ಎಂ ಜಂಕ್ಷನ್ ಬಳಿ, 
 
ರಿಚ್ ಮಂಡ್ ಸರ್ಕಲ್ ಬಳಿ/ಕ್ವಿನ್ಸ್ ಸರ್ಕಲ್ ಬಳಿ ಅವಕಾಶ..
 
ಅಲ್ಲಿಂದ ಅರಮನೆ ಮೈದಾನದಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ..
 
ಸಮಾರಂಭಕ್ಕೆ ಯಾವುದೇ ರೀತಿಯ ಸ್ಫೋಟಕ,
 
 ಚೂಪಾದ ವಸ್ತುಗಳನ್ನು ಬೆಂಕಿಪಟ್ಟಣ, ಲೈಟರ್ ಗಳು ತರದಂತೆ ಸೂಚನೆ..
 
ಇನ್ನೂ ಮುಖ್ಯ ಕೆಲಸಗಳು, ಪರೀಕ್ಷೆಗೆ" ಕಂಠೀರವ ಸ್ಟೇಡಿಯಂ ಸಮೀಪವಿರುವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8.30ರ ಒಳಗಾಗಿ ತಲುಪುವಂತೆ ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ