ಮಹಿಳೆ ಜೊತೆಗೆ ಕ್ಯಾಬ್ ಚಾಲಕನ ಕಿರಿಕ್..!

ಶುಕ್ರವಾರ, 11 ಆಗಸ್ಟ್ 2023 (19:40 IST)
ಕೆಲವ್ರಿಗೆ ಕೆಲ ವ್ಯಕ್ತಿಗಳಿಗಿಂತ ಹೆಚ್ಚಾಗಿ ವಸ್ತುವಿನ ಮೇಲೆ ಅಪಾರ ಪ್ರೀತಿ ಇರುತ್ತೆ.ಅದಕ್ಕೆ ಸ್ವಲ್ಪ‌ ಡ್ಯಾಮೆಜ್ ಆದ್ರೂ ಸಹಿಸ್ಕೊಳ್ಳಲ್ಲ.ಇಲ್ಲಾಗಿರೋದು ಕೂಡ ಅದೇ.ಕಾರಿನ ಡೋರ್ ಜೋರಾಗಿ‌ ಹಾಕಿದ್ರು ಅಂತಾ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ.ಅದೇ ತಪ್ಪಿಗೆ ಕಂಬಿ ಹಿಂದೆ ಸೇರುವಂತೆ ಮಾಡಿದೆ.ಯುವಕನ ಹೆಸರು ಬಸವರಾಜ್.ವಯಸ್ಸು 23 ವರ್ಷ.ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವ್ನು.ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ.ತಂದೆ ತಾಯಿ ಮೇಲೆ ಪ್ರಾಣ ಇಟ್ಟುಕೊಂಡಿದ್ದ..ಹಾಗಾಗಿ ಕ್ಯಾಬ್ ಹಿಂದೆ ಅಪ್ಪಾಜಿ ಎಂದು ಬರೆಸಿಕೊಂಡಿದ್ದ..ತನ್ನ ಕಾರನ್ನು ತಾಯಿಯಂತೆ ನೋಡಿಕೊಳ್ತಿದ್ದ.ಅದಕ್ಕೆ ಸ್ವಲ್ಪ ಡ್ಯಾಮೆಜ್ ಆದರೂ ಸಹಿಸಿಕೊಳ್ತಿರ್ಲಿಲ್ಲ.ಅದೇ ಈಗ ಆತನಿಗೆ ಮುಳುವಾಗಿದೆ.

ಕ್ಯಾಬ್ ಚಾಲಕನಾಗಿದ್ದ ಬಸವರಾಜ್ ಗೆ ಮಾರತ್ತಹಳ್ಳಿ ಹಾಗೂ ದೊಡ್ಡಕನ್ನಹಳ್ಳಿ ಮಾರ್ಗದಲ್ಲಿರುವ ಬೋಗನಹಳ್ಳಿ ಪ್ರೆಸ್ಟಿಜ್ ಸಮ್ಮರ್ ಫೀಲ್ಡ್ಸ್ ಅಪಾರ್ಟ್ ಮೆಂಟ್ ನಲ್ಲಿ ಬುಕಿಂಗ್ ಬಂದಿದೆ.ಕಾರು ತೆಗೆದುಕೊಂಡು ಸೀದಾ ಬಂದ ಬಸವರಾಜ್ ಕಾರಿನೊಳಗೆ 48 ವರ್ಷದ ವಿನಿತಾ ಅಗರ್ವಾಲ್ ಅನ್ನೋ ಮಹಿಳೆ ಮಗನ ಜೊತೆಗೆ ಹತ್ತಿದ್ದಾಳೆ.ತಕ್ಷಣ ಚಾಲಕ ಓಟಿಪಿ ಕೇಳಿದ್ದಾನೆ.ಆದರೆ ಓಟಿಪಿ ತಪ್ಪಾಗಿತ್ತು.ಯಾಕಂದ್ರೆ ಅದೇ ಅಪಾರ್ಟ್ ಮೆಂಟ್ ನಲ್ಲಿ ಎರಡು ಕ್ಯಾಬ್ ಬುಕ್ ಆಗಿತ್ತು..ಮಹಿಳೆ ತಾನು ಬುಕ್ ಮಾಡಿದ್ದ ಕ್ಯಾಬ್ ನ ಬದಲಾಗಿ ಮತ್ತೊಂದು ಕ್ಯಾಬ್ ಹತ್ತಿಕೊಂಡೊದ್ಳು.ಈ ವೇಳೆ ಮಹಿಳೆಯನ್ನ ಕಾರಿನಿಂದ ಕೆಳಗೆ ಇಳಿಯುವಂತೆ ಚಾಲಕ ಹೇಳಿದ್ದ..ಇಳಿಯುವ ವೇಳೆ ಕಾರು ಸ್ವಲ್ಪ ಮೂವ್ ಆಗಿದೆ.ಈ‌ ವೇಳೆ ಕೋಪಗೊಂಡ ಮಹಿಳೆ ಚಾಲಕನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಅಲ್ಲದೇ ಕಾರಿನ ಡೋರ್ ಅನ್ನು ಕೋಪದಿಂದ ಜೋರಾಗಿ‌ ಹಾಕಿದ್ದಾಳೆ ಇದರಿಂದ ಕೋಪಗೊಂಡ ಚಾಲಕ ಮಹಿಳೆಯನ್ನು ನೂಕಿದ್ದಾನೆ.

ತಕ್ಷಣ ಅಪಾರ್ಟ್ ಮೆಂಟ್ ಗೇಟ್ ಕ್ಲೋಸ್ ಮಾಡಿಸಿದ ನಿವಾಸಿ ಮಹಿಳೆ ಪತಿ ಬೆಳ್ಳಂದೂರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.ಅದೇನೆ ಹೇಳಿ ಕಾರನ್ನು ಎಷ್ಟೇ ಪ್ರೀತಿ ಯಿಂದ ನೋಡಿಕೊಂಡಿದ್ದಿದ್ರು..ಡೋರ್ ಜೋರಾಗಿ ಹಾಕಿದ್ರು ಅನ್ನೋ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆಗೆ ಮುಂದಾಗಿದ್ದು ನಿಜಕ್ಕೂ ಖಂಡನೀಯ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ