ಗಾಂಧಿ ಗ್ರಾಮ ಪುರಸ್ಕಾರಕ್ಕೆ 2 ನೇ ಬಾರಿ ಆಯ್ಕೆ
ಗ್ರಾಮ ಪಂಚಾಯತಿ ಗಳು ಅಂದ್ರೆ ಸಾಕು, ಕೆಲವು ಕಡೆ ಅವ್ಯವಹಾರ ಹಾಗೂ ಕುಂದು ಕೊರತೆಗಳ ತಾಣವಾಗಿರುತ್ತೆ. ಅದ್ರೆ ಈ ಗ್ರಾಮ ಪಂಚಾಯತಿ ಡಿಫೆರೆಂಟ್.
ಚಿತ್ರದುರ್ಗ ನಗರದ ಹೊರ ವಲಯದ ಮಠದ ಕುರುಬರ ಹಟ್ಟಿ ಗ್ರಾಮದಲ್ಲಿನ ಪಂಚಾಯಿತಿ ಸತತವಾಗಿ ಕಳೆದ ಎರಡು ವರುಷಗಳಿಂದ ಪುರಸ್ಕಾರಕ್ಕೆ ಆಯ್ಕೆಯಾಗುತ್ತಿದೆ. ಈ ಗ್ರಾಮ ಪಂಚಾಯತಿ ಹಲವಾರು ಉತ್ತಮ ಕೆಲಸಗಳು ಮಾಡಿದೆ.
ಪಂಚಾಯತಿ ವ್ಯಾಪ್ಯಿಗೆ ಬರೋ ನಾಲ್ಕು ಹಳ್ಳಿಗಳಿಗೆ ಶುದ್ಧ ಕುಡಿಯೋ ನೀರು, ಶೌಚಾಲಯ, ಸಿಸಿ ರಸ್ತೆ ನಿರ್ಮಾಣ ಮಾಡಿ ಗ್ರಾಮಗಳನ್ನು ಅಭಿವೃದ್ಧಿ ಮಾಡಿದೆ. ಇನ್ನೂ ಪಂಚಾಯತಿಗೆ ಬರೋ ಆದಾಯದಲ್ಲಿ ಕೂಡ ಪ್ರತಿವರ್ಷ ಹೆಚ್ಚಿಸಿಕೊಂಡಿದೆ.