ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಶಾರುಕ್ ಖಾನ್, ಸಿಎಂ ಬ್ಯಾನರ್ಜಿಯವರ ಕಾಲು ಮುಟ್ಟಿ ನಮಸ್ಕರಿಸಿದಾಗ ಅವರ ನಡುವಿನ ವಿಶೇಷ ಸಂಬಂಧ ನೆರೆದಿದ್ದ ಜನತೆಗೆ ಸ್ಪಷ್ಟವಾಗಿತ್ತು. ಸಹೋದರನಿಗೆ ಬೀಳ್ಕೋಡುವಂತೆ ದೀದಿ, ಶಾರುಕ್ರನ್ನು ನೋಡಿಕೊಂಡಿರುವುದು ನೆರೆದಿದ್ದವರಲ್ಲಿ ಸಂತಸದ ಸಂಭ್ರಮ ಕಂಡು ಬಂದಿತು.
ಕೋಲ್ಕತಾಗೆ ಆಗಮಿಸಿದ್ದ ಶಾರುಕ್ಗೆ, ಕಾರ್ಯಕ್ರಮ ಮುಗಿದ ನಂತರ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದು ಬೇರೆ ಯಾರು ಅಲ್ಲ. ಸ್ವತಃ ಸಿಎಂ ಬ್ಯಾನರ್ಜಿ. ಶಾರುಕ್ ಖಾನ್ ದೀದಿಯ ಸ್ಯಾಂಟ್ರೋ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿಡಿಯೋ ವೈರಲ್ ಆಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ಸೂಪರ್ಸ್ಟಾರ್ ಶಾರುಕ್ ಖಾನ್ ಮಧ್ಯ ಸಹೋದರಿ, ಸಹೋದರನ ಅನ್ಯೋನ್ಯವಾದ ಸಂಬಂಧವಿದೆ. ನಗರಕ್ಕೆ ಬಂದಾಗಲೆಲ್ಲಾ ಮಮತಾ ಬ್ಯಾನರ್ಜಿ(ದೀದಿ)ಯನ್ನು ಭೇಟಿ ಮಾಡುವ ಶಾರುಕ್ಗೆ ಕೋಲ್ಕತಾ ಎರಡನೇ ತವರುಮನೆಯಾಗಿ ಹೊರಹೊಮ್ಮಿದೆ.
ಒಂದು ಸಣ್ಣ ಕಾರಿನಲ್ಲಿ ಎಸ್ಆರ್ಕೆ ಸವಾರಿ ಮಾಡಿ ಎಷ್ಟು ಕಾಲವಾಗಿದೆಯೋ ಎನ್ನುವಂತೆ ವಿಮಾನ ನಿಲ್ದಾಣದಲ್ಲಿದ್ದ ಜನರು ಆಸಕ್ತಿಯನ್ನು ತೋರುತ್ತಿದ್ದರು. ಆದರೆ, ಮೌನವಾಗಿ ಮುಂದೆ ಸಾಗಿದ ಶಾರುಕ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದ್ದರು ಎನ್ನಲಾಗಿದೆ.