ಶೀರೂರು ಶ್ರೀಗಳಿಗೆ ಭೂಗತ ನಂಟು?: ಹರಿದಾಡುತ್ತಿರುವ ವದಂತಿ...!
 
	
		
			 
										    		ಬುಧವಾರ,  25 ಜುಲೈ 2018 (15:07 IST)
	    		     
	 
 
				
											ಶೀರೂರು ಶ್ರೀಗಳಿಗೆ ಭೂಗತ ನಂಟು ಇದೆಯೆಂಬ ಸುದ್ದಿ ಹರಿದಾಡುತ್ತಿದ್ದಂತೆ ಪೊಲೀಸರು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಶ್ರೀಗಳಿಗೆ ಆಪ್ತರಾಗಿದ್ದ ಉದ್ಯಮಿಗಳ ವಿಚಾರಣೆ ಮಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಕಲ್ಸಂಕದಲ್ಲಿರುವ ಕನಕ ಮಾಲ್ನ ಪಾಲುದಾರ ಕೂಡ ಮುಂಬೈನಲ್ಲಿದ್ದು, ಆತನನ್ನು ಪೊಲೀಸರು ವಿಚಾರಣೆ ಮಾಡುವ ಸಾಧ್ಯತೆ ಇದೆ.
									
				
											ಶೀರೂರು ಶ್ರೀಗಳ ನಿಗೂಢ ಸಾವಿನ ಪ್ರಕರಣದ ಕುರಿತಂತೆ ಉಡುಪಿಯ ಶೀರೂರು ಮಠದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ವಶದಲ್ಲಿರುವ ಶ್ರೀಗಳ ಅಂಗರಕ್ಷಕ ಜಗದೀಶ್ (ಜಗ್ಗ) ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತನನ್ನು ಉಡುಪಿಯ ಮಠಕ್ಕೆ ಕರೆದುಕೊಂಡು ಮಹಜರು ಮಾಡಿದ್ದಾರೆ.
									
				
											ಉಡುಪಿಯ ಶೀರೂರು ಮಠದ ಹಿಂಬದಿಯ ಬಾವಿಯ ಸಮೀಪ ಎರಡು ಗೋಣಿಚೀಲಗಳು ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರೊಳಗೆ ಏನಿದೆ ಎನ್ನುವುದು ಬಹಿರಂಗಗೊಂಡಿಲ್ಲ. ಬಾವಿಯನ್ನು ತೀವ್ರ ಶೋಧ ಮಾಡಿರುವ ಪೋಲಿಸರು ಅಲ್ಲಿ ಸಿಕ್ಕಿರುವ ಕೆಲವೊಂದು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
									
				
											ಶ್ರೀಗಳಿಗೆ ಮದ್ಯ ಸೇವನೆ ಮಾಡುವ ಹವ್ಯಾಸ ಇದ್ದರಿಂದ ಅಲ್ಲಿ ಕೆಲವೊಂದು
ಮದ್ಯಬಾಟಲಿಗಳು, ಮದ್ಯ ಸೇವನೆಗೆ ಬಳಸುತ್ತಿದ್ದ ವಸ್ತುಗಳು ಸಿಕ್ಕಿವೆ. ಮಹಜರಿಗೆ ಜಗ್ಗನನ್ನು ಕರೆತಂದಿರುವ ಪೊಲೀಸರು ಆತನಿಂದ ಇಲ್ಲಿನ ಕೆಲವೊಂದು ಮಾಹಿತಿ ಕಲೆಹಾಕಿದ್ದಾರೆ. ಮಠದಲ್ಲಿಯೂ ಶೋಧ ಮಾಡಿದ್ದಾರೆ. 
									
				
											ಶೀರೂರು ಮೂಲ ಮಠದಲ್ಲಿರುವ ಸಿಸಿಟಿಯ ಡಿವಿಆರ್ ನಾಪ್ತೆಯಾಗಿವೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ಕೇವಲ ವದಂತಿ. ಡಿವಿಆರ್ ಪೊಲೀಸರ ವಶದಲ್ಲಿದ್ದು, ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿಯಲ್ಲಿ ದಾಖಲಗಿರುವ ಪ್ರತಿಯೊಂದು ದೃಶ್ಯವಾಳಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಹಾಗೂ ಅಂಗರಕ್ಷಕರ ಜಗದೀಶ್ ಪೊಲೀಸರ ವಶದಲ್ಲಿದ್ದು, ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರಿಂದ ತನಿಖೆಗೆ ಬೇಕಾದ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. 
ಶ್ರೀಗಳಿಗೆ ಭೂಗತ ನಂಟು ಇದೆಯೆಂಬ ಸುದ್ದಿ ಹರಡುತ್ತಿದ್ದಂತೆ ಪೊಲೀಸರು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಶ್ರೀಗಳಿಗೆ ಆಪ್ತರಾಗಿದ್ದ ಉದ್ಯಮಿಗಳ ವಿಚಾರಣೆ ಮಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಕಲ್ಸಂಕದಲ್ಲಿರುವ ಕನಕ ಮಾಲ್ನ ಪಾಲುದಾರ ಕೂಡ ಮುಂಬೈನಲ್ಲಿದ್ದು, ಆತನನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.
									
  
	
	
   
	
   
		
		
		