ಕಾಂಗ್ರೆಸ್‌ಗೆ ಹೋದ್ಮೇಲೆ ಠುಸ್ ಆಗಿದ್ದೀರಿ: ಸದನದಲ್ಲಿ ಶಿವಲಿಂಗೇಗೌಡ ಕಾಲೆಳೆದ ಬಿಜೆಪಿ

Sampriya

ಮಂಗಳವಾರ, 18 ಮಾರ್ಚ್ 2025 (16:56 IST)
Photo Courtesy X
ಬೆಂಗಳೂರು:  ಸದನದಲ್ಲಿ ಶಾಸಕ ಶಿವಲಿಂಗೇಗೌಡ ಅವರು ರಾಜ್ಯ ಸರ್ಕಾರದ ಪರ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿದರು. ಈ ವೇಳೆ ಶಿವಲಿಂಗೇಗೌಡ ಮಾತಿಗೆ ವಿರೋಧ ಪಕ್ಷದ ನಾಯಕರು ಅಸಮಾಧಾನ ಹೊರಹಾಕಿದರು.

ಮಧ್ಯಪ್ರವೇಶಿಸಿದ ಸ್ಪಿಕರ್ ಯುಟಿ ಖಾದರ್ ಅವರು ಶಿವಲಿಂಗೇಗೌಡ ಅವರ ಮಾತು ಮುಗಿಯಲಿ. ಮತ್ತೇ ನೀವು ಮಾತನಾಡುವಿರಂತೆ ಎಂದು ಬಿಜೆಪಿಯವರಿಗೆ ಹೇಳಿದರೂ. ಸುಮ್ಮನಿರದ ಬಿಜೆಪಿ ನಾಯಕರ ಮಾತಿಂದ್ದ ಶಿವಲಿಂಗೇಗೌಡ ಅವರು ಮಾತನಾಡಲು ಸಾಧ್ಯವಾಗಿಲ್ಲ. ಸ್ಪಿಕರ್ ಅವರು ನೀವು ಅವರ ಕಡೆ ಯಾಕೆ ನೋಡುತ್ತೀರಿ, ನನ್ನನ್ನು ನೋಡಿ, ಮಾತು ಮುಂದುವರೆಸಿ ಎಂದು ಹೇಳುತ್ತಾರೆ.

ಅಲ್ಲಿಂದ್ದ ಬಿಜೆಪಿ ಶಾಸಕರೊಬ್ಬರು ಎದ್ದು, ನಾವು ನಿಮ್ಮ ಮಾತನ್ನು ಕೇಳುವ ಸಲುವಾಗಿಯೇ ಇಷ್ಟೊಂದು ಕಾದಿದ್ದು, ಆದರೆ ಇದೀಗ ನಿಮ್ಮ ಮಾತು ಕೇಳಲು ಸಾಧ್ಯವಾಗುತ್ತಿಲ್ಲ.  ಈ ವೇಳೆ  ಬಿಜೆಪಿ ಶಾಸಕ ಸುರೇಶ್‌ ಗೌಡ ಅವರು ನೀವು ಜೆಡಿಎಸ್‌ನಲ್ಲಿರುವಾಗ ಎಲ್ಲರೂ ನಿಮ್ಮ ಮಾತನ್ನು ಕೇಳುತ್ತಿದ್ದರು. ಆದರೆ ಕಾಂಗ್ರೆಸ್‌ಗೆ ಹೋಗಿ ಠುಸ್ ಆಗಿದ್ದೀರಿ ಎಂದು ಕಾಲೆಳೆದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ