ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಕೆ-ಅನಗತ್ಯ ವೆಚ್ಚಕ್ಕೆ ಕಡಿವಾಣ

ಶನಿವಾರ, 18 ಸೆಪ್ಟಂಬರ್ 2021 (20:45 IST)
ಬೆಂಗಳೂರು ನಗರದಲ್ಲಿ ಬಸ್ ಡಿಪೋಗಳಲ್ಲಿ ಹಾಕಲು ಹಾಗೂ ಆದಾಯ ವೃದ್ದಿಸಿಕೊಳ್ಳಲು ಮುಂದಾಗಿರುವ ಬಿಎಂಟಿಸಿ, ಇಗ ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದೆ. ಕೇಂದ್ರದ ಸಹಕಾರದೊಂದಿಗೆ ಬಿಎಂಟಿಸಿ ತನ್ನ ಎಲ್ಲ ಘಟಕಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದೆ. ಇದರಿಂದ ಪ್ರತಿ ಘಟಕಗಳಲ್ಲಿ ೫೦ ಕಿಲೋ ವ್ಯಾಟ್‌ಗೂ ಹೆಚ್ಚು ವಿದ್ಯುತ್ ಉತ್ಪಾದಿಸಲಾಗುತ್ತದೆ. ನಿತ್ಯ ೬.೫೬೮ ಯೂನಿಟ್ ಉತ್ಪಾದನೆಯಾಗುತ್ತದೆ. ಇದರಿಂದ ಬಿಎಂಟಿಸಿಗೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗುವದಲ್ಲದೆ ಘಟಕಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ನೀಟುವ ಮೂಲಕ ಹೆಚ್ಚಿನ ಆದಾಯ ಗಳಿಸುವತ್ತ ಗಮನಹರಿಸಿದೆ.  ಬಿಎಂಟಿಸಿಯಲ್ಲಿ ಸದ್ಯ ೪೫ ಘಟಕಗಳು ೧೦ ಟಿಟಿಎಂಸಿಗಳು ಹಾಗೂ ೨ ಪ್ರಮುಖ ಬಸ್ ನಿಲ್ದಾಣಗಳಿವೆ ಪ್ರತಿ ಘಟಕಗಳಲ್ಲಿ ತಿಂಗಳಲ್ಲಿ ೫೦ ಸಾವಿರ ರೂ ಬರುತ್ತಿದ್ದು ಎಲ್ಲ ಘಟಕಗಳಲ್ಲಿ ತಿಂಗಳಿಗೆ ಅಂದಾಜು ೧.೬೦ ಕೋಟಿ ರೂ ಬಿಲ್ ಬರುತ್ತಿದ್ದು ಈ ವಿದ್ಯುತ್  ಬಿಲ್ಲನ್ನು ಉಳಿತಾಯ ಮಾಡುವ ಸಲುವಾಗಿ  ಈ ಕಾರ್ಯ ಕೈಗೆತ್ತಿಕೊಂಡಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷರಾದ ಡಾ ಎಂ ಆರ್ ವೆಂಕಟೇಶ್ ಅವರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ