ವಿಜಯಪುರ : ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲೇಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಹಿಂ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಖಾಂತರ ಎಲ್ಲಾ ಸಮಾಜದವರು ಸೇರಿ ಬಗೆಹರಿಸಲಿ ಇಲ್ಲವಾದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಲು ನಾವು ಸಿದ್ದ ಎಂದು ಹೇಳಿದ್ದಾರೆ.
ಇನ್ನು ಟಿಪ್ಪು ಜಯಂತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಂದಿನ ಕಾಲದಲ್ಲಿ ಟಿಪ್ಪು ಶ್ರೀರಂಗನ ಹೆಸರಿನಲ್ಲಿ ತನ್ನ ರಾಜಧಾನಿಯನ್ನು ಮಾಡಿಕೊಂಡಿದ್ದ. ಬ್ರಿಟಿಷರಿಗೆ ಕೊಡಲು ಹಣವಿಲ್ಲದಿದ್ದಾಗ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ. ಶೃಂಗೇರಿ ಹಾಗೂ ಸುತ್ತೂರು ಮಠಗಳನ್ನು ಕಾಪಾಡಿದವನು ಟಿಪ್ಪು. ನಾವು ರಾಜಕೀಯದವರು ಟಿಪ್ಪು ಜಯಂತಿಯನ್ನು ಉಪಯೋಗಿಸಿಕೊಂಡು ವೋಟ್ ಬ್ಯಾಂಕ್ ಮಾಡಿಕೊಂಡಿದ್ದೇವೆ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.