ಸಿನಿಮಾ ಹಬ್ಬಕ್ಕೆ ದಿನಗಣನೆ ಶುರು ; ಚಿತ್ರರಸಿಕರಿಗೆ ಹಬ್ಬವೋ ಹಬ್ಬ

ಶುಕ್ರವಾರ, 21 ಫೆಬ್ರವರಿ 2020 (14:18 IST)
ಸಿನಿಮಾ ರಸಿಕರಿಗೆ ಹಬ್ಬವೋ ಹಬ್ಬದಂತ ವಾತಾವರಣ ದೊರಕಲು ದಿನಗಣನೆ ಶುರುವಾಗಿದೆ.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ಫೆ. 26 ರಿಂದ ಮಾ. 4 ರವರೆಗೆ ಚಿತ್ರೋತ್ಸವ ನಡೆಯಲಿದೆ.

ಬೆಂಗಳೂರಿನ ಓರಾಯನ್ ಮಾಲ್ ನಲ್ಲಿರೋ 11 ಪರದೆಗಳಲ್ಲಿ ದೇಶ-ವಿದೇಶಗಳ 200 ಕ್ಕಿಂತ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಚಿತ್ರೋತ್ಸವದಲ್ಲಿ ವಿವಿಧ ಸ್ಪರ್ಧೆಗಳು, ಸಂವಾದ, ಚರ್ಚೆ ಮೊದಲಾದ ಚಟುವಟಿಕೆಗಳು ನಡೆಯಲಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ