ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿ ಅನುಮತಿ ನೀಡಲು ಸುಪ್ರೀಂ ನಕಾರ

ಸೋಮವಾರ, 4 ಸೆಪ್ಟಂಬರ್ 2017 (12:13 IST)
ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿಬಿಐ ಸಲ್ಲಿಸಿದ್ದ ಆಕ್ಷೇಪಣೆಯನ್ನ ಕೋರ್ಟ್ ಪುರಸ್ಕರಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನಕ್ಕೀಡಾಗಿ ಜಾಮಿನು ಪಡೆದ ಬಳಿಕ ಬಳ್ಳಾರಿಗೆ ತೆರಳದಂತೆ ಸಿಬಿಐ ವಿಶೇಷ ಕೋರ್ಟ್ ಷರತ್ತು ವಿಧಿಸಿತ್ತು. ಬಳಿಕ ಹಲವು ಬಾರಿ ಬಳ್ಳಾರಿಗೆ ತೆರಳಲಲು ರೆಡ್ಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದೆ ಮಗಳ ಮದುವೆಗಾಗಿ 21 ದಿನ ಬಳ್ಳಾರಿಗೆ ತೆರಳಲಲು ಅನುಮತಿ ನೀಡಲಾಗಿತ್ತು. ಸಂಬಂಧಿಕರ ಮದುವೆಗೂ ತೆರಳಲು ಅನುಮತಿ ಸಿಕ್ಕಿತ್ತು. ಆದರೆ, ಇದೀಗ, ಬಳ್ಳಾರಿಗೆ ತೆರಳಲು ಻ನುಮತಿ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಜನಾರ್ದನರೆಡ್ಡಿಗೆ ನೀಡಿರುವ ಜಾಮೀನಿನ ಷರತ್ತುಗಳಲ್ಲಿ ಬಳ್ಳಾರಿಗೆ ತೆರಳದಂತೆ ಸಹ ಸೂಚಿಸಿರುವುದು ಒಂದು ಷರತ್ತು. ಹೀಗಾಗಿ, ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದೆಂದು ಸಿಬಿಐ ಪರ ವಕೀಲರು ವಾದಿಸಿದ್ದರು. ಸಿಬಿಐ ವಾದವನ್ನ ಪುರಸ್ಕರಿಸಿರುವ ಕೋರ್ಟ್ ಜನಾರ್ದನರೆಡ್ಡಿ ಮನವಿಯನ್ನ ತಿರಸ್ಕರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ