ಕ್ರಿಯಾ ಸಮಾಧಿ ಸಂಪ್ರದಾಯದಂತೆ ಗೌರಿಶಂಕರ ಸ್ವಾಮೀಜಿ ಅಂತಿಮ ಸಂಸ್ಕಾರ

ಗುರುವಾರ, 12 ಜನವರಿ 2017 (07:40 IST)
ನಿನ್ನೆ ಲಿಂಗೈಕ್ಷರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಮಾಜಿ ಶಿಷ್ಯ  ಗೌರಿಶಂಕರ ಸ್ವಾಮೀಜಿ (71) ಅವರ ಅಂತ್ಯಕ್ರಿಯೆ ಇಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗೊಲ್ಲ ಹಳ್ಳಿಯ ಜಂಗಮಮಠದಲ್ಲಿ ನಡೆಯಿಲಿದೆ.
 

 
ಕ್ರಿಯಾ ಸಮಾಧಿ ಸಂಪ್ರದಾಯದಂತೆ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಗುತ್ತಿದೆ. ಇಂದು ನಸುಕಿನ ಜಾವ 5 ಗಂಟೆಗೆ ಸ್ವಾಮೀಜಿಗೆ ಸ್ನಾನ ಮಾಡಿಸಿ 4 ಗೋಡೆಯಿಂದ ನಿರ್ಮಿಸಿದ ಸಮಾಧಿಯಲ್ಲಿ ಕೂರಿಸಿ ಪೂಜೆ ಮಾಡಲಾಯಿತು. ಇಂದು ಸಂಜೆಯವರೆಗೂ ಪಾರ್ಥಿವ ಶರೀರದ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. 
 
ಕಳೆದ ಕೆಲ ತಿಂಗಳಿಂದ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ನಿನ್ನೆ ಮುಂಜಾನೆ ಬೆಂಗಳೂರಿನ ಕೇಂಪೇಗೌಡ ಆಸ್ಪತ್ರೆಯಲ್ಲಿ ಲಿಂಗೈಕ್ಷರಾಗಿದ್ದರು.
 
ಇವರು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಈ ಸಂಬಂಧ ಕೋರ್ಟ್ ಮೆಟ್ಟಿಲನ್ನು ಕೂಡ ಏರಿದ್ದರು. ಈ ಕುರಿತಂತೆ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಲವು ಕಾರಣಗಳಿಂದ ಇವರನ್ನು ಮಠದಿಂದ ಹೊರಹಾಕಲಾಗುತ್ತಿತ್ತು. ಬಳಿಕ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಸಿದ್ದಗಂಗಾ ಮಠ ಸ್ಥಾಪಿಸಿ ವಾಸವಾಗಿದ್ದರು. 
 
ಇತ್ತೀಚಿಗಷ್ಟೇ ಸಿದ್ಧಗಂಗಾ ಶ್ರೀಗಳನ್ನು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಕೋರ್ಟ್ ಅನುಮತಿ ಪಡೆದಿದ್ದರೂ ಶ್ರೀಗಳು ಇದಕ್ಕೆ ನಿರಾಕರಿಸಿದ್ದರು. ಕೊನೆಗಳಿಗೆಯಲ್ಲೂ ನನಗೆ ಪಟ್ಟ ಬೇಡ, ಗುರುಗಳು ಬೇಕು ಎಂದು ಕೊರಗುತ್ತ ಅವರು ಪ್ರಾಣ ಬಿಟ್ಟಿದ್ದು ಮಾತ್ರ ವಿಪರ್ಯಾಸವೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ