ತಾಂತ್ರಿಕ ದೋಷ ; KSRTC ಬಸ್‌ನಲ್ಲಿ ಹೊಗೆ
ತಾಂತ್ರಿಕ ದೋಷ ಹಿನ್ನೆಲೆ KSRTC ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಸಮೀಪದಲ್ಲಿ ನಡೆದಿದೆ.
ಪುಣೆ ಟು ಬಾಗಲಕೋಟೆ ಮಾರ್ಗದ KSRTC ಸ್ಲೀಪರ್ ಕೋಚ್ ಬಸ್ ಜಮಖಂಡಿ ಸಮೀಪ ಬರ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತುಕೊಂಡ ಬಸ್ ಚಾಲಕ ಕೂಡಲೇ ಬಸ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನ ಕೂಡಲೇ ಕೆಳಗಿಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.