ತೇಜಸ್ವಿ ಸೂರ್ಯ ವಿರುದ್ಧ ಮೀ ಟೂ ಆರೋಪ

ಬುಧವಾರ, 3 ಏಪ್ರಿಲ್ 2019 (15:37 IST)
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಏ. 10 ರಂದು ವಿಚಾರಣೆಗೆ ಹಾಜರಾಗುವಂತೆ ಮಹಿಳಾ ಆಯೋಗ ಡೆಡ್ ಲೈನ್ ನಿಗದಿಪಡಿಸಿದೆ.

ಮಹಿಳಾ ಆಯೋಗ ತೇಜಸ್ವಿ ವಿರುದ್ಧ ಜಾರಿಮಾಡಿದ್ದ ನೋಟಿಸ್ ಅನುಸಾರ, ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ತೇಜಸ್ವಿ ಪರ ವಕೀಲರ ಮನವಿ‌ ಮೇರೆಗೆ ಏ. 10 ರವರೆಗೆ ವಿಚಾರಣೆ ಮುಂದೂಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗ ಲಕ್ಷ್ಮೀ ಬಾಯಿ ತಿಳಿಸಿದ್ದಾರೆ. 

ಮೀ ಟೂ ಆರೋಪದಡಿ ಕಾಂಗ್ರೆಸ್ ಮಹಿಳಾ ಘಟಕ, ತೇಜಸ್ವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು‌ ನೀಡಿತ್ತು.
ತೇಜಸ್ವಿ ಅವರಿಂದ ನೊಂದಿರುವುದಾಗಿ ಹೇಳಿಕೊಂಡಿದ್ದ ಮಹಿಳೆಯೊಬ್ಬರ ಟ್ವೀಟ್ ಆಧರಿಸಿ ಈ ದೂರು ಸಲ್ಲಿಸಲಾಗಿದೆ. 
ಇನ್ನೊಂದೆಡೆ,  ತಮಗೆ ಇದೂವರೆಗೆ ಯಾವುದೇ ನೋಟಿಸ್ ತಲುಪಿಲ್ಲ ಎಂದು ತೇಜಸ್ವಿ ಸೂರ್ಯ ಪರ ವಕೀಲ ಸಂದೀಪ್ ಸ್ಪಷ್ಟಪಡಿಸಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ