ಮಗುವಿನ ಜೀವಕ್ಕೆ ಕುತ್ತು ತಂದಿದೆ ತಾಯಿ ಸರದಲ್ಲಿದ್ದ ಸೇಫ್ಟಿ ಪಿನ್

ಬುಧವಾರ, 31 ಅಕ್ಟೋಬರ್ 2018 (14:41 IST)
ಮುಂಬೈ : ಮಹಿಳೆಯರು ಹೆಚ್ಚಾಗಿ ಸೀರೆಗಳನ್ನು ಉಡುವಾಗ ಸೇಫ್ಟಿ ಪಿನ್ ಗಳು ಕೈಗೆ ಬೇಗನೆ ಸಿಗಬೇಕು ಎಂದು ಅದನ್ನು ಸರಕ್ಕೆ ಹಾಕಿಕೊಳ್ಳುತ್ತಾರೆ. ಮಹಿಳೆಯರು ಮಾಡುವ  ಈ ಕೆಲಸದಿಂದ ಮಗುವೊಂದರ ಜೀವ ಅಪಾಯಕ್ಕೆ ಸಿಲಿಕಿಕೊಂಡ ಘಟನೆಯೊಂದು ಕಳೆದ ವಾರ ಮುಂಬೈನಲ್ಲಿ ನಡೆದಿದೆ.


ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರದಲ್ಲಿ ಪಿನ್ ಸಿಕ್ಕಿಸಿಕೊಂಡಿದ್ದರು. ನಂತರ ಆಕೆ  ತನ್ನ ಮಗುವನ್ನು ಎತ್ತಿಕೊಂಡ ವೇಳೆ ಮಗು ತಾಯಿ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಬಾಯಿಗೆ ಹಾಕಿಕೊಂಡಿದೆ. ಆಗ ಮಗು ಸರದಲ್ಲಿದ್ದ ಪಿನ್  ಅನ್ನು ನುಂಗಿದ್ದು, ಈ  ಪಿನ್ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ.


ಮಗು ನೀರು ಕುಡಿಯಲು ಆಗದೆ ಜೋರಾಗಿ ಅಳುತ್ತಿರುವುದನ್ನು ಗಮನಿಸಿದ ಹೆತ್ತವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಮಗುವಿನ ಎಕ್ಸ್ ರೇ ತೆಗೆದಾಗ ಮಗುವಿನ ಗಂಟಲಲ್ಲಿ ಪಿನ್ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ತಕ್ಷಣ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಗಂಟಲಲ್ಲಿ ಸಿಲುಕಿದ್ದ ಪಿನ್ ಹೊರತೆಗೆಯಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ