ಮೈತ್ರಿ ಸರಕಾರ ಪತನಕ್ಕೆ ಬಿಜೆಪಿ ರೆಡಿ ಇದೆ ಎಂದ ಸಚಿವ

ಶನಿವಾರ, 4 ಮೇ 2019 (17:58 IST)
ಲೋಕಸಭೆ ಚುನಾವಣೆಯ ಫಲಿತಾಂಶ ನಂತರ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕೈ ಹಾಕುವುದು ನಿಶ್ಚಿತ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟ್ ಬಂದರೆ ಕೈ ಹಾಕ್ತಾರೆ. 2014 ರಲ್ಲಿ ಬಂದ ಸಂಖ್ಯಾಬಲ ಬಿಜೆಪಿಗೆ ಬಂದ್ರೆ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡ್ತಾರೆ ಎಂದ್ರು.

23 ರ ನಂತರ ಕೆಂಪುಗೂಟದ ಕಾರುಗಳಲ್ಲಿ ಓಡಾಡುತ್ತಿರುವವರು ಮಾಜಿಯಾಗಲಿದ್ದಾರೆ ಎಂಬ ರಮೇಶ ಜಾರಕಿಹೊಳಿಗೆ ಕುಟುಕಿದ ಸತೀಶ್ ಜಾರಕಿಹೊಳಿ, ರಮೇಶ ಜಾರಕಿಹೊಳಿಗೆ ಕೆಂಪು ಗೂಟದ ಕಾರ್, ಸರ್ಕಾರ ಏನೂ ಐಡಿಯಾ ಇರಲ್ಲ.  ಕೆಂಪು ದೀಪ ನಿಷೇಧವಾಗಿರೋದು ಗೊತ್ತಿಲ್ಲ ಅನಿಸುತ್ತೆ, ಅವನಿಗೆ ಏನೂ ಗೊತ್ತಿರೋದಿಲ್ಲ. ಗೊತ್ತಿಲ್ದೆ ಮಾತಾಡ್ತಾನೆ.
ಅಧಿಕಾರ ಹೋದವರು ಮಾಜಿ ಆಗೇ ಆಗ್ತಾರೆ ಎಂದ್ರು.

ಮೇ 23 ಬಂದಾದ್ರೂ ಬರಲಿ ನೋಡೋಣ ಎಂದ ಸತೀಶ್ ಜಾರಕಿಹೊಳಿ, ಪ್ರಧಾನಿ ಮೋದಿ ವಿರುದ್ಧ ಗರಂ ಆದ್ರು. ಪ್ರಧಾನಿ ಮೋದಿ ಎಲ್ಲ ಕಡೆ ಆಪರೇಷನ್ ಕಮಲ ಮಾಡ್ತಿದಾರೆ. ಇರೋ ಸರ್ಕಾರವನ್ನ ಅಸ್ಥಿರ ಮಾಡ್ತಿದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ. ಮೋದಿ ಕಾಲದಲ್ಲಿ ಇದು ಕಾಮನ್ ಆಗಿದೆ ಎಂದ್ರು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದ ಸತೀಶ್ ಜಾರಕಿಹೊಳಿ, ಅಲ್ಲಲ್ಲಿ ಅಸಮಾಧಾನ ‌ಇದೆ. ಮುಂದಿನ ದಿನಗಳಲ್ಲಿ ಎಲ್ಲ ಸರಿಹೋಗಲಿದೆ. ಅದರಿಂದ ‌ಸರ್ಕಾರಕ್ಕೆ ಏನೂ ಧಕ್ಕೆ ಇಲ್ಲ ಎಂದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ