ಜಮೀನಿನಲ್ಲೇ ನಡೆದ ಘಟನೆಗೆ ಕಣ್ಣೀರಲ್ಲಿ ಕೈತೊಳೆಯುತ್ತಿರೋ ಕುಟುಂಬ

ಗುರುವಾರ, 10 ಅಕ್ಟೋಬರ್ 2019 (18:03 IST)
ಜಮೀನೊಂದರಲ್ಲಿ ನಡೆಯಬಾರದ ಘಟನೆ ನಡೆದುಹೋಗಿದ್ದು, ಘಟನೆಯಿಂದಾಗಿ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ.

ವಿಷಪೂರಿತ ಹಾವು ಕಡಿದು ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸಂತೆಬಾಚಹಳ್ಳಿ ಪಟ್ಟಣದ ಯಲಾಲದಹಳ್ಳಿ ಗ್ರಾಮದ ಗೌಡೇಗೌಡರ ಪುತ್ರ ಶಿವಲಿಂಗೇಗೌಡ(58) ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.  

ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಶಿವಲಿಂಗೇಗೌಡರಿಗೆ ವಿಷಪೂರಿತ ಹಾವೊಂದು ಕಡಿದಿದೆ.
ತಕ್ಷಣ ಕುಟುಂಬದವರು ಅವರನ್ನು ಕೃಷ್ಣರಾಜಪೇಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಲಿಂಗೇಗೌಡ ಸಾವನಪ್ಪಿದ್ದಾರೆ. ರೈತನ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ