ವಿಮಾನ ಸೇವೆ ಅಕ್ಟೋಬರ್‌ 10 ರಿಂದ ಆರಂಭ

ಗುರುವಾರ, 6 ಅಕ್ಟೋಬರ್ 2022 (21:17 IST)
ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿ ಇಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರಿಗೆ  ಹೊಸದೊಂದು  ಮಾರ್ಗ ಸಿಕ್ಕಿದೆ. ಬ್ಲೇಡ್‌ ಇಂಡಿಯಾ ಕಂಪನಿ  ಬೆಂಗಳೂರಿನ ಒಳಗೆ ಚಾಪರ್‌ ಸೇವೆ ಆರಂಭಿಸುವುದಾಗಿ ಘೋಷಿಸಿದೆ.ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಸಿಟಿಯ ಒಳಗೆ ಪ್ರಯಾಣಿಸಲು  ಚಾಪರ್‌ ಸೇವೆ ಆರಂಭಿಸಿದೆ.
 
 ಏರ್‌ ಪೋರ್ಟ್‌ ಇಂದ ಸಿಟಿಗೆ ಹೋಗಲು ತಗಲುವ ಎರಡು ಗಂಟೆಗಳ ಬದಲಿಗೆ ನೀವು 15 ನಿಮಿಷಗಳಲ್ಲಿ ಸಿಟಿಗೆ ತಲುಪಬಹುದಾಗಿದೆ.ಈ ಸೇವೆ ಅಕ್ಟೋಬರ್‌ 10 ರಿಂದ ಆರಂಭವಾಗಲಿದೆ.ವಾರದಲ್ಲಿ 5 ದಿನಗಳ ಕಾಲ ಈ ಸೇವೆ ಲಭ್ಯ ಇರುತ್ತೆ. ಒಂದು ಸೀಟ್‌ ನ ಬೆಲೆ 3250 ರೂ. ಗಳಾಗಿವೆ. H125 DVG ಏರ್‌ಬಸ್ ಹೆಲಿಕಾಪ್ಟರ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಂದೇ ಬಾರಿಗೆ ಐದರಿಂದ ಆರು ಪ್ರಯಾಣಿಕರೊಂದಿಗೆ ಹಾರಬಲ್ಲದು.120 ನಿಮಿಷದ ಬದಲಿಗೆ 15 ನಿಮಿಷ ಪ್ರಯಾಣಿಸಬಹುದು.ಈ ಕುರಿತು ತನ್ನ‌ ವೆಬ್‌ ಸೈಟ್‌ ನಲ್ಲಿ ಘೋಷಣೆ ಮಾಡಿರುವ ಬ್ಲೇಡ್‌ ಕಂಪನಿ, ಈ ಚಾಪರ್‌ ಸೇವೆಯೊಂದಿಗೆ ಪ್ರಯಾಣಿಕರು 120 ನಿಮಿಷಗಳ ಸವಾರಿಯನ್ನು 15 ನಿಮಿಷಗಳ ಏರ್‌ ರೈಡ್‌ ಗೆ ಬದಲಾಯಿಸಲು ಸಾಧ್ಯವಾಗುತ್ತೆ . ಜನರು ಹೆಚ್‌ ಎ ಎಲ್‌ ಗೆ ಪ್ರಯಾಣಿಸುವಾಗಿನ ಕಿರಿಕಿರಿಯ ಬದಲಿಗೆ 15 ನಿಮಿಷಗಳ ತ್ವರಿತ ಹಾರಾಟ ಕೈಗೊಳ್ಳಬಹುದು ಎಂದು ಹೇಳಿದೆ. ನಂತರದ ದಿನಗಳಲ್ಲಿ ಈ ಚಾಪರ್‌ ಸೇವೆಗೆ ಇನ್ನಷ್ಟು ಮಾರ್ಗಗಳನ್ನುಸೇರಿಸುವುದಾಗಿ ಕಂಪನಿ ಹೇಳಿದೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಆದಷ್ಟು ಬೇರೆ ಈ ಲಿಸ್ಟ್‌ ನಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ