ಬಿಗ್ ಬಾಸ್ ಸ್ಪರ್ಧಿ ,ಗಾಯಕ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಕಿರಿಕ್

ಗುರುವಾರ, 6 ಅಕ್ಟೋಬರ್ 2022 (21:05 IST)
ಬಿಗ್ ಬಾಸ್ ಸ್ಪರ್ಧಿ, ಗಾಯಕ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಕಿರಿಕ್ ನಡೆದಿದೆ.ಊರ್ವಶಿ ಥಿಯೇಟರ್ ನಲ್ಲಿ ಸೀಟ್ ನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದ್ದು,ನಾಲ್ಕೈದು ಮಂದಿಯಿಂದ ವಾಸುಕಿ ಆ್ಯಂಡ್ ಫ್ರೆಂಡ್ಸ್ ಜೊತೆ ಕಿರಿಕ್ ಮಾಡಿರುವ ಆರೋಪ  ಕೇಳಿಬಂದಿದೆ.ಇನ್ನೂ ಈ ಘಟನೆ ಅಕ್ಟೋಬರ್ 3ರ ಸಂಜೆ ಊರ್ವಶಿ ಥಿಯೇಟರ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
 
ಅಕ್ಟೋಬರ್ 3ರ ಮಧ್ಯಾಹ್ನ ವಾಸುಕಿ, ಅವರ ಸ್ನೇಹಿತ ದರ್ಶನ್ ಗೌಡ,ಗೆಳತಿ ಜೊತೆ ಫಿಲಂ ನೋಡಲು ಹೋಗಿದ್ರು.ಊರ್ವಶಿ ಚಿತ್ರಮಂದಿರದಲ್ಲಿ ಕಾಂತಾರ ಫಿಲಂ ನೋಡಲು ಹೋಗಿದ್ರು.ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್ ನಲ್ಲಿ  ವಾಸುಕಿ ವೈಭವ್ ಹಾಗೂ ಸ್ನೇಹಿತರು ಕುಳಿತ್ತಿದ್ರು.ಈ ವೇಳೆ ವಾಸುಕಿ ಕುಳಿತಿದ್ದ ಸೀಟ್ ಮುಂದೆ ಕೂರಲು ಬಂದ ನಾಲ್ಕೈದು ಮಂದಿ ಗುಂಪು.ಆಗ ಬೇಗ ಹೋಗುವಂತೆ  ವಾಸುಕಿ ಸ್ನೇಹಿತ ದರ್ಶನ್ ಗೌಡ ಹಾಗೂ ಅವರ ಗೆಳತಿ ಹೇಳಿದ್ದಾರೆ.ಇದರಿಂದ ಕುಪಿತರಾದ ಮುರುಳಿ, ಬಸವರಾಜ್ ಹಾಗೂ ಸ್ನೇಹಿತರಿಂದ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.
 
ವಾಸುಕಿ ಹಾಗೂ ಗೆಳತಿಗೆ ಅಸಭ್ಯ ಪದ ಬಳಸಿ ನಿಂದನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.ಈ ವೇಳೆ ತಿರುಗಿಸಿ ಬೈದಿದ್ದ ದರ್ಶನ್ ಗೌಡ ಹಾಗೂ ಆತನ ಗೆಳತಿ ಸುಮ್ಮನಾಗದೇ ಎದುರಾಳಿ ಗುಂಪಿನವರಿಂದ ಇಂಟರವಲ್ ನಲ್ಲಿ ಮತ್ತೆ ಕಿರಿಕ್ ಮಾಡಿದ್ದಾರೆ. ಎದುರಾಳಿ ಗುಂಪಿನಲ್ಲಿದ್ದ ಬಸವರಾಜ್, ಮುರುಳಿ ಮತ್ತಿತರರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಎನ್.ಸಿ.ಆರ್ ಕೇಸ್ ಏನು ಬೇಡ ಎಂದು ಹೇಳಿದ್ದ ಗಾಯಕ ವಾಸುಕಿ ವೈಭವ್ ಹಾಗೂ ಸ್ನೇಹಿತರು ಸಾರಿ ಕೇಳಿದ್ರೆ ಸಾಕು ಅಂತಾ ವಾಸುಕಿ ವೈಭವ ಹಾಗೂ ಫ್ರೆಂಡ್ಸ್ ಹೇಳಿದ್ರು.ಹಾಗಾಗಿ‌ ವಾಸುಕಿ ವೈಭವ್ ಸ್ನೇಹಿತೆಗೆ ಕ್ಷಮೆ ಕೇಳಿದ್ದ ನಂತರವು ಗುಂಪು ಗಲಾಟೆ ಮಾಡಿದೆ.ಇಷ್ಟಕ್ಕೆ ಸುಮ್ಮನಾಗದೇ ದರ್ಶನ್ ಗೌಡ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದರು.
 
ದರ್ಶನ್ ಗೌಡ ದೂರಿನ್ವಯ ಎನ್ ಸಿಆರ್ ಮುರುಳಿ,ಬಸವರಾಜ್ ,ಇತರರ ವಿರುದ್ಧ ದಾಖಲುಮಾಡಲಾಗಿದೆ.ಕ್ಷಮೆ ಕೇಳುವುದರೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ.ಕೆಲ ಗಂಟೆಗಳ ಕಾಲ ಸ್ಟೇಷನ್ ನಲ್ಲಿ ಇದ್ದ ಗಾಯಕ ವಾಸುಕಿ ವೈಭವ್, ನಿರ್ದೇಶಕ ಪನ್ನಾಗಭರಣ ಹಾಗೂ ಸ್ನೇಹಿತರ ನಡುವೆ ಸಂಧಾನ ಮಾಡಿ  ಕಲಾಸಿಪಾಳ್ಯ ಪೊಲೀಸರು ಕಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ