ಐ ಪೋನ್ ಕದಿಯುತ್ತಿದ್ದ ಗ್ಯಾಂಗ್ ಅಂದರ್

ಮಂಗಳವಾರ, 21 ಮಾರ್ಚ್ 2023 (19:40 IST)
ಐ ಪೋನ್ " ಕದಿಯುತ್ತಿದ್ದ ಖದೀಮರ ಗ್ಯಾಂಗ್ ನ್ನ ವಿವೇಕನಗರ ಪೋಲಿಸರು ಅಂದರ್ ಮಾಡಿದ್ದಾರೆ.ಬರೋಬ್ಬರಿ 40 ಐ ಪೋನ್ ಸೇರಿ ಒಟ್ಟು 110 ಪೋನ್ ಗಳು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಮೊಬೈಲ್ ರಾಬರಿ ಗ್ಯಾಂಗ್ ಅರೆಸ್ಟ್ ಮಾಡಿದ ವಿವೇಕನಗರ ಪೊಲೀಸರು ಖತರ್ನಾಕ್‌ ಕಳ್ಳರನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಮಹಮ್ಮದ್ ಸಕ್ಲೈನ್ , ಸುಹೇಲ್ ,ಸಾಕೀಬ್ ಬಂಧಿತರು ಬೆಂಗಳೂರಿನ ಗೋರಿಪಾಳ್ಯ ನಿವಾಸಿಗಳು .ಬಂಧಿತರಿಂದ ಬರೋಬ್ಬರಿ 40 ಲಕ್ಷ ಮೌಲ್ಯದ ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.ವಿವೇಕನಗರ ಪೊಲೀಸರಿಂದ ತನಿಖೆ  ಮುಂದುವರೆದಿದೆ. ಅಲ್ಲದೆ ರಾತ್ರಿ ವೇಳೆಯಲ್ಲಿ ಸಂಚರಿಸುವವರನ್ನ ಗುರಿಯಾಗಿಸಿಕೊಂಡು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗುತ್ತಿದ್ರು. ಬಂದಿತ ಆರೋಪಿಗಳ ವಿರುದ್ದ ನಗರದ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ