ಪಶುಪಾಲನೆ ಹಾಗೂ ಪಶುವೈದ್ಯಕೀಯ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ ಪಶುಸಂಗೋಪನಾ ಸಚಿವ

ಸೋಮವಾರ, 9 ಸೆಪ್ಟಂಬರ್ 2019 (12:07 IST)
ಬೆಂಗಳೂರು : ಪಶುಪಾಲನೆ ಹಾಗೂ ಪಶುವೈದ್ಯಕೀಯ ಅಧಿಕಾರಿಗಳನ್ನು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ರು ತರಾಟೆ ತೆಗೆದುಕೊಂಡಿದ್ದಾರೆ.ಸಚಿವ ಪ್ರಭು ಚೌಹಾಣ್ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದರು. ಆ  ವೇಳೆ ಅಧಿಕಾರಿಗಳ ಬೇಜವಬ್ದಾರಿ ಕೆಲಸಗಳನ್ನು ಕಂಡು ಅವರು ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.

 

ವಾರಗಟ್ಟಲೆ ಹಾಜರಿ ಪುಸ್ತಕಕ್ಕೆ ಸಹಿ ಹಾಕದ ಅಧಿಕಾರಿಗಳಿಗೆ ಹಾಗೂ ಗುಟ್ಕಾ ಜಗಿಯುತ್ತಿದ್ದ ಎಫ್.ಡಿಎ ಯನ್ನು ಸಚಿವರು  ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ  ಮದ್ಯ ಸೇವಿಸಿ ಕಚೇರಿಗೆ ಬಂದಿದ್ದ ನೌಕರನ ಅಮಾನತು ಮಾಡಲು ಆದೇಶಿಸಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ