ಬೆಂಗಳೂರಿಗೆ 7 ಪುಟಾಣಿ ಮಕ್ಕಳನ್ನು ಕಮೀಷನರ್ ಆಗಿ​ ನೇಮಿಸಿದ ಪೊಲೀಸ್​ ಆಯುಕ್ತ. ಕಾರಣವೇನು ಗೊತ್ತಾ?

ಸೋಮವಾರ, 9 ಸೆಪ್ಟಂಬರ್ 2019 (11:17 IST)
ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿಗೆ 7 ಪುಟಾಣಿ ಮಕ್ಕಳನ್ನು ಇಂದು  ಪೊಲೀಸ್​ ಕಮೀಷನರ್​ ಗಳಾಗಿ ಬೆಂಗಳೂರು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ನೇಮಿಸಿದ್ದಾರೆ.



ಪೊಲೀಸ್​ ಅಧಿಕಾರಿಯಾಗಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದ 7 ಜನ ಪುಟಾಣಿಗಳು ವಿಚಿತ್ರ ಖಾಯಿಲೆಗಳಿಂದ ಬಳಲುತ್ತಿರುವ ಕಾರಣ ಅವರ ಆಸೆ ತೀರಿಸಲು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರು ಈ 7 ಜನ ಪುಟಾಣಿಗಳಿಗೆ ಒಂದು ದಿನದ ಮಟ್ಟಿಗೆ ಪೊಲೀಸ್ ಕಮೀಷನರ್ ಗಳಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.


ಇಂದು ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ 7 ಮಕ್ಕಳಿಗೆ ಪೊಲೀಸ್​ ಸಿಬ್ಬಂದಿ ಪೊಲೀಸ್​ ಗೌರವ ವಂದನೆ ನೀಡಲಿದ್ದಾರೆ. ಬಳಿಕ ಆ ಮಕ್ಕಳನ್ನು ತಮ್ಮ ಅಧಿಕೃತ ಸ್ಥಾನದಲ್ಲಿ ಕೂರಿಸಿ ಕರ್ತವ್ಯ ನಿರ್ವಹಿಸಲು ಸಲಹೆ ನೀಡಲಿದ್ದಾರೆ. ಇವರ ಈ ಚಿಂತನೆ ಎಲ್ಲೆಡೆ ಭಾರೀ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ