ನೇಮಕಾತಿ ವಿಳಂಬ ಖಂಡಿಸಿ 4 ನೇ ದಿನಕ್ಕೆ ಕಾಲಿಟ್ಟ ಶಿಕ್ಷಕರ ಮೌನ ಪ್ರತಿಭಟನೆ

ಗುರುವಾರ, 6 ಜುಲೈ 2023 (17:36 IST)
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಹಿನ್ನಲೆ 4ನೇ ದಿನಕ್ಕೆ  ಶಿಕ್ಷಕರ ಪ್ರತಿಭಟನೆ ಕಾಲಿಟ್ಟಿದೆ.ಫ್ರೀಡಂ ಪಾರ್ಕ್ ನಲ್ಲಿ ಭಾವಿ ಶಿಕ್ಷಕರಿಂದ ಪ್ರತಿಭಟನೆ ನಡೆಯುತ್ತಿದ್ದು,ರಾಜ್ಯದ ವಿವಿಧ ಭಾಗಗಳಿಂದ ಫ್ರೀಡಂ ಪಾರ್ಕ್ ಶಿಕ್ಷಕರು ಆಗಮಿಸಿದ್ದು,2022ರ ಸಾಲಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 15,000 ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.ಆ ಪೈಕಿ 13,352 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ.ಆದರೆ ಇನ್ನೂ ಕೂಡ ನೇಮಕಾತಿ ಆದೇಶ ಪ್ರತಿ ಅಭ್ಯರ್ಥಿಗಳ ಕೈ ಸೇರಿಲ್ಲ.ಈ ಹಿನ್ನಲೆ ಈಗಾಗಲೇ ಸಚಿವರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.ಹಾಗಾಗಿ ಮೌನಪ್ರತಿಭಟನೆಯ ಮೊರೆ ಶಿಕ್ಷಕರು ಹೋಗಿದ್ರು.
 
ಈಗಾಗಲೇ ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಗಳೂ ತಮ್ಮನ್ನು ಕೈ ಬಿಟ್ಟಿದೆ ಎಂದು ಅಭ್ಯರ್ಥಿಗಳು ನೋವು ತೋಡಿಕೊಂಡ್ರು.ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ಹಿನ್ನಲೆ ಬೇರೆ ಕೆಲಸಕ್ಕೂ ಸೇರಲು ತೊಂದರೆಯಾಗುತ್ತಿದೆ .ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ, ನಮಗೆ ನೇಮಕಾತಿ ಆದೇಶ ಪ್ರತಿ ಕೊಡಿ ಎಂದು ಭಾವಿ ಶಿಕ್ಷಕ ಬಂಧುಗಳು ಆಳಲು ತೋಡಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ