ಕೊರೊನಾದಿಂದ ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್

ಸೋಮವಾರ, 6 ಏಪ್ರಿಲ್ 2020 (19:38 IST)
ಕೊರೊನಾ ಸೋಂಕಿನಿಂದ ಬಳಲಿ ಆ ಬಳಿಕ ಚಿಕಿತ್ಸೆ ಪಡೆದುಕೊಂಡು ಮುಕ್ತರಾದ ಇಬ್ಬರನ್ನು ಆಸ್ಪತ್ರೆಯಿಂದ‌ ಬಿಡುಗಡೆಗೊಳಿಸಲಾಗಿದೆ.

ದಾವಣಗೆರೆ ನಗರದ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೊರೋನಾ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿ ಸಂಖ್ಯೆ 42  ಮತ್ತು ಅವರ ಸಂಬಂಧಿ ರೋಗಿ ಸಂಖ್ಯೆ 75 ಅವರು ಕೊರೊನಾದಿಂದ ಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಈ ಇಬ್ಬರು ವ್ಯಕ್ತಿಗಳ ವೈದ್ಯಕೀಯ ವರದಿಯು ಚಿಕಿತ್ಸೆಯ ನಂತರ ನೆಗೆಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗ ಸೂಚಿಗಳ ಅನ್ವಯ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ.

ಕಳೆದ 24 ಗಂಟೆ ಗಳ ಅವಧಿಯಲ್ಲಿ ಎರಡು ಬಾರಿ ಸಂಗ್ರಹಿಸಿದ ಗಂಟಲು ಮಾದರಿಯಲ್ಲಿ ನೆಗೆಟಿವ್ ವರದಿ ಬಂದಿರುವುದು ಮತ್ತು ಇಬ್ಬರಿಗೂ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ನೀಡಿದ ದೃಢೀಕರಣದ ನಂತರ ಮುಂದಿನ 14 ದಿನಗಳ ಕಾಲ ಗೃಹ ನಿಗಾವಣೆಯಲ್ಲಿರುವುದು ಹಾಗೂ ನಿತ್ಯ ತಮ್ಮ ಆರೋಗ್ಯದ ಬಗ್ಗೆ ಸ್ವಯಂ ವರದಿಯನ್ನು ಮಾಡಲು ಸೂಚಿಸಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ