ಕಳ್ಳತನ ಪ್ರಕರಣ: ಸ್ಥಳ ಪರಿಶೀಲನೆಗೆ ಬಂದ ಇನ್ಸಪೆಕ್ಟರ್ ಜೊತೆ ವಾಗ್ವಾದ

ಸೋಮವಾರ, 13 ಜೂನ್ 2022 (20:28 IST)
ನಿನಗೆ ಏನು ಮಾಡಿಕೊಳ್ಳೋಕೆ ಆಗಲ್ಲ. ನಿಮ್ಮಂತವರನ್ನ ಬಹಳ ಜನ ನೋಡಿದ್ದೇನೆ. ನಿಮ್ಮ ಕೈಯಲ್ಲಿ ಏನೂ ಮಾಡೋಕೆ ಸಾಧ್ಯವಿಲ್ಲ. ಹೀಗಂತ ಪೊಲೀಸರೊಂದಿಗೆ ವ್ಯಕ್ತಿಯೊಬ್ಬ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಎಂದು ಹೇಳಲಾಗಿದ್ದು, 
ಪೊಲೀಸ್ ಅಧಿಕಾರಿಗಳಿಗೆ ಬಟ್ಟೆ ಬಿಚ್ಚಿಟ್ಟು ಮನೆಗೆ ಹೋಗಿ ಎಂದು ಅವಾಜ್ ಹಾಕಿದ್ದಾನೆ. ಅಷ್ಟಕ್ಕೂ ಈ ವಾಗ್ವಾದಕ್ಕೆ ಕಾರಣ ನಗರದಲ್ಲಿ ನಡೆದ ಕಳ್ಳತನ ಪ್ರಕರಣವಾಗಿದೆ.
ಹೌದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ನಡದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ‌ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ ತಂಡ
ಪರಿಶೀಲನೆ ಮಾಡಲು ಬಂದ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಮಲ್ಲಿಕಾರ್ಜುನ್ ಸತ್ತಿಗೇರಿ ಎಂಬ ವ್ಯಕ್ತಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಏಕ ವಚನದಲ್ಲಿಯೇ ಆವಾಜ್ ಹಾಕಿದ ಘಟನೆ ನಡೆದಿದೆ. ಮಲ್ಲಿಕಾರ್ಜುನ್ ಸತ್ತಿಗೇರಿ ಹಿಂದೂಪರ ಸಂಘಟನೆ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿಗೆ ಜೊತೆ ವಾಗ್ವಾದ ನಡೆಯುತ್ತಿದ್ದ ವೇಳೆ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ