ಹೊಸ ವರ್ಷದಲ್ಲಿ ಕುಡಿದು ಬೀಳೋ ಯುವತಿಯರಿಗೆ ಈ ಸುದ್ದಿ

ಮಂಗಳವಾರ, 31 ಡಿಸೆಂಬರ್ 2019 (18:34 IST)

ಹೊಸ ವರ್ಷವನ್ನು ಕುಡಿದು ಸಂಭ್ರಮಿಸಿ ಕೊನೆಗೆ ನಶೆಯಲ್ಲಿ ಎಲ್ಲೆಲ್ಲೋ ಬೀಳುವ ಹುಡುಗಿಯರು ನೀವಾಗಿದ್ದರೆ ಈ ಸುದ್ದಿ ಓದಿ.
 

ರಸ್ತೆಯಲ್ಲಿ ಹೊವ ವರ್ಷದಂದು ಕುಡಿದು ತೂರಾಡುತ್ತಾ ಸಾಗಿದರೆ ಆಗ ಅಂಥ ಮಹಿಳೆಯರಿಗೆ ಪೊಲೀಸರು ರಾಜ ಮರ್ಯಾದೆಯ ವ್ಯವಸ್ಥೆ ಮಾಡಿದ್ದಾರೆ.

ಅದೇನಪ್ಪಾ ಅಂದರೆ, ಐಲ್ಯಾಂಡ್ ಅಂತ ವ್ಯವಸ್ಥೆ ಮಾಡಿದ್ದು ಅಲ್ಲಿ ಕುಡಿದ ಗುಂಗಲ್ಲಿ ಬಿದ್ದು ಗಾಯಗೊಂಡರೆ ಅದಕ್ಕೆ ಚಿಕಿತ್ಸೆ ಹಾಗೂ ಹಾಸಿಗೆ ವ್ಯವಸ್ಥೆ ಇದೆ.

ಅಷ್ಟೇ ಅಲ್ಲ, ವಿಳಾಸ ನೀಡಿದರೆ ಕ್ಯಾಬ್ ಗಳ ಮೂಲಕ ಕುಡುಕರ ಮನೆಗಳಿಗೆ ಕಳಿಸಿಕೊಡಲಾಗುತ್ತಿದೆ. ಪುರುಷರಿಗೂ ಈ ಸೇವೆ ಲಭ್ಯವಿದೆಯಾದರೂ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ