ಚಂದ್ರ ಮೇಲ್ಮೈ ಮೇಲೆ ಕಾಲಿಡಲಿರುವ ಮಹಿಳಾ ಗಗನಯಾತ್ರಿ

ಶುಕ್ರವಾರ, 17 ಮೇ 2019 (08:50 IST)
ಬೆಂಗಳೂರು: ಚಂದ್ರನ ಮೇಲ್ಮೈಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುವ ಕುರಿತು ಕೆಲವು ತಿಂಗಳ ಹಿಂದಷ್ಟೇ ಹೇಳಿದ ನಾಸಾ ಈಗ ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದೆಯಂತೆ. ಮೂಲಗಳ ಪ್ರಕಾರ ನಾಸಾದ ಗಗನಯಾತ್ರಿ ಅನ್ನಿ ಮೆಕ್ಲೇನ್‌ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.




ಅಪೋಲೋ ಮೂಲಕ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಅರ್ಟಿಮಿಸ್‌ ಯೋಜನೆಯಗೆ ನಾಸಾ ಸಿದ್ಧತೆ ನಡೆಸಿದೆ. ಈ ಮೂಲಕ ಚಂದ್ರನ ಮೇಲ್ಮೈಗೆ ಮಹಿಳೆಯರನ್ನು ಕಳುಹಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರವಾಗಲಿದೆ.


ಈ ಯೋಜನೆಗಾಗಿ ನಾಸಾ ವಿಶೇಷ ಕ್ರ್ಯು ಕ್ಯಾಪ್ಸುಲ್‌ ಹಾಗೂ ರಾಕೆಟ್‌ಗಳನ್ನು ಸಿದ್ಧಪಡಿಸುತ್ತಿದೆ. ಓರ್ವ ಪುರುಷ ಗಗನಯಾತ್ರಿ ಹಾಗೂ ಚಂದ್ರನ ಮೇಲ್ಮೈ ಮೇಲೆ ಕಾಲಿಡುವ ಮೊದಲ ಮಹಿಳಾ ಗಗನಯಾತ್ರಿ ಇಬ್ಬರನ್ನು ಕಳುಹಿಸುವ ಯೋಜನೆ ಮಾಡಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ