ಭಾರೀ ಮಳೆಗೆ ನಗರದಲ್ಲಿ ಮೂರು ಮನೆಗಳು ಕುಸಿದಿರುವ ಘಟನೆ ಬೆಂಗಳೂರಿನ ಪಿಇಎಸ್ ಕಾಲೇಜ್ ಬಳಿಯ ವೀರಭದ್ರ ನಗರದಲ್ಲಿ ನಡೆದಿದೆ.ಅಪಾರ್ಟ್ ಮೆಂಟ್ ನ ತಡೆಗೋಡೆ ಸಮೇತ ಸಂಪೂರ್ಣವಾಗಿ ಮನೆಗಳು ನೆಲ ಸಮವಾಗಿದೆ.ವಸುಂಧರ ಕೃತಿಕಾ ಅಪಾರ್ಟ್ ಮೆಂಟ್ ನ ತಡೆ ಗೋಡೆ ಸಮೇತ ಮನೆ ಬಿದ್ದಿದ್ದು,ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರೆಡು ಕಾರುಗಳು ಸಂಪೂರ್ಣ ಜಖಂ ಆಗಿದೆ. ಮತ್ತೆರಡು ಕಾರುಗಳಿಗೂ ಹಾನಿ ಉಂಟಾಗಿದೆ.ಘಟನೆಯಲ್ಲಿ ಯಾರಿಗೂ ಸಹ ಹಾನಿಯಾಗಿಲ್ಲ.ಗೋಪಾಲ್ ಹಾಗೂ ಗೋವಿಂದಯ್ಯ ಎಂಬುವರ ಮನೆ ಸಂಪೂರ್ಣ ಕುಸಿದು ಹಾನಿಯಾಗಿದೆ.
ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೆಲಸಮವಾಗಿದ್ದು,ದುರ್ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ..ಅಪಾರ್ಟ್ ಮೆಂಟ್ ತಡೆಗೋಡೆ ಸರಿಯಾಗಿ ಕಟ್ಟಿಲ್ಲದಿದ್ದೇ ಘಟನೆ ಕಾರಣ ಅಂತ ಸ್ಲಂ ನಿವಾಸಿಗಳು ಆರೋಪ ಮಾಡಿದ್ದಾರೆ.ಆದ್ರೆ ಸ್ಲಂನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ.ಇದರಿಂದ ಪ್ರತಿನಿತ್ತ ಬರುವ ಕೊಳಚೆ ನೀರಿನಿಂದ ಕಾಂಪೌಂಡ್ ವಾಲ್ ಕುಸಿದಿದೆ ಎಂದು ಅಪಾರ್ಟ್ ನಿವಾಸಿಗಳು ಹೇಳ್ತಿದ್ದು,ಮತ್ತೊಂದು ಕಡೆ ಇನ್ನೂ ಬೀಳುವ ಸ್ಥಿತಿಯಲ್ಲಿ ಐದಾರು ಮನೆಗಳಿವೆ.ಮಧ್ಯಾಹ್ನ ಘಟನೆಯಾದ್ರೂ ಇನ್ನೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.ಮನೆ ಕಳೆದುಕೊಂಡ ಸ್ಲಂ ನಿವಾಸಿಗಳಿಂದ ಅಳಲು ಕೇಳತಿರದಾಗಿದೆ.