ತ್ರಿಬಲ್ ರೈಡಿಂಗ್ ತಂದ ಕುತ್ತು

ಮಂಗಳವಾರ, 5 ಡಿಸೆಂಬರ್ 2017 (08:27 IST)
ಬೆಂಗಳೂರು: ಕಂಠಪೂರ್ತಿ ಕುಡಿದು ಬುಲೆಟ್ ನಲ್ಲಿ  ತ್ರಿಬಲ್ ರೈಡಿಂಗ್ ನಲ್ಲಿ ಚಲಿಸುತ್ತಿದ್ದ ಸವಾರರು ನಿಯಂತ್ರಣ ತಪ್ಪಿ  ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಘಟನೆಯೊಂದು ನಿನ್ನೆ ರಾತ್ರಿ ಬೆಂಗಳೂರಿನ ಹೆಬ್ಬಾಳದಲ್ಲಿ ಸಂಭವಿಸಿದೆ.


ಸವಾರರು ನಿಯಮಗಳನ್ನು ಪಾಲಿಸದೇ ಕಂಠಪೂರ್ತಿ ಕುಡಿದು ಬೈಕ್ ನಲ್ಲಿ ಸವಾರಿ ಮಾಡಿದ್ದಲ್ಲದೇ,  ತ್ರಿಬಲ್ ರೈಡ್ ನಲ್ಲಿಯೂ ಕೂಡ ಚಲಿಸುತ್ತಿದ್ದರು. ಬುಲೆಟ್ ಅನ್ನು ಅಡ್ಡಾದಿಡ್ಡಿ ಓಡಿಸಿ ಮುಂದೆ ಚಲಿಸುತ್ತಿರುವ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದ್ದಾರೆ.


ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ