ಉಪೇಂದ್ರರ ಪ್ರಜಾಕೀಯ ಕೆಲಸ ಮತ್ತೆ ಶುರು

ಬುಧವಾರ, 11 ಸೆಪ್ಟಂಬರ್ 2019 (15:40 IST)
ಪ್ರಜಾಕೀಯ ಪಕ್ಷದ ಚಟುವಟಿಕೆಗಳು ಮತ್ತು ಶುರುವಾಗಿವೆ.

ಸಂಚಾಲಕ ಚಂದ್ರೇಗೌಡ ಅವರಿಂದ ಚಾಲನೆ ನೀಡಲಾಗಿದೆ. ಮಂಡ್ಯ ಪಟ್ಟಣದ ಕೃಷ್ಣರಾಜಪೇಟೆಯಲ್ಲಿ
ಸದ್ಯದಲ್ಲಿಯೇ ಪ್ರಜಾಕೀಯ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಅವರು ಭೇಟಿ ನೀಡಲಿದ್ದಾರೆ. ಶಾಲಾ -ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ವಿಚಾರಧಾರೆಗಳ ಮಂಥನವನ್ನು ಉಪೇಂದ್ರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ ಚಂದ್ರೇಗೌಡ.

ಭ್ರಷ್ಟಾಚಾರ ಮುಕ್ತವಾದ ಪಾರದರ್ಶಕವಾದ ಸ್ವಚ್ಛ ಆಡಳಿತ ನೀಡುವುದರ ಜೊತೆಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ನೀಡಬೇಕೆಂಬುದು ಪ್ರಜಾಕೀಯ ಪಕ್ಷದ ಆಶಯವಾಗಿದೆ ಎಂದ್ರು. ದೇವರಾಜೇಗೌಡ, ಚಂದ್ರೇಗೌಡ, ಸಣ್ಣಸ್ವಾಮಿಗೌಡ ಸುದ್ದಿಗೋಷ್ಠಿಯಲ್ಲಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ