ಯಾರಿಗೋಸ್ಕರ ಬಂದ್ ಮಾಡಬೇಕು ಅನಿಸ್ತಿದೆ, ಹೋಟೆಲ್ ನವರಿಗೆ ದುರಹಂಕಾರ: ವಾಟಾಳ್ ನಾಗರಾಜ್

Krishnaveni K

ಶನಿವಾರ, 22 ಮಾರ್ಚ್ 2025 (11:32 IST)
ಬೆಂಗಳೂರು: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ಬಂದಿರುವುದಕ್ಕೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ನವರಿಗೆ ದರಹಂಕಾರ ಎಂದಿದ್ದಾರೆ.
 

ಇಂದಿನ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ, ಬಸ್ ಎಂದಿನಂತೆ ಓಡಾಡುತ್ತಿದ್ದರೆ, ಅಂಗಡಿ ಮಾಲಿಕರೂ ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ. ಹೋಟೆಲ್ ಗಳೂ ತೆರೆದಿವೆ.

ಈಗಾಗಲೇ ಹೋಟೆಲ್ ಮಾಲಿಕರು ನಾವು ಬಂದ್ ಮಾಡಲ್ಲ, ನೈತಿಕ ಬೆಂಬಲವಷ್ಟೇ ನೀಡುತ್ತೇವೆ ಎಂದಿದ್ದರು. ಇದಕ್ಕೆ ವಾಟಾಳ್ ನಾಗರಾಜ್ ಇಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನೈತಿಕ ಬೆಂಬಲ ಎಂದರೆ ಅರ್ಥ ಏನು? ಯಾರಿಗೆ ಬೇಕ್ರೀ ನಿಮ್ಮ ನೈತಿಕತೆ? ಹೋಟೆಲ್ ನವರಿಗೆ ದರಹಂಕಾರ. ಹೋಟೆಲ್ ನವರಿಗೆ, ಅಂಗಡಿಯವರಿಗೆ ಮುಚ್ಚಬೇಡಿ ಎಂದು ಪೊಲೀಸರ ಕೈಯಲ್ಲೇ ಹೇಳಿಸಿದ್ದಾರೆ.

ಇದನ್ನೆಲ್ಲಾ ನೋಡುವಾಗ ಯಾರಿಗೋಸ್ಕರ ಚಳವಳಿ ಮಾಡಬೇಕು? ಯಾತಕ್ಕೋಸ್ಕರ ಮಾಡಬೇಕು ಎನಿಸುತ್ತದೆ. ಆದ್ರೂ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಸಹಕಾರ ಕೊಟ್ಟ ಸಂಘ, ಸಂಸ್ಥೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ