ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ವೆಸ್ಟ್ ನೈಲ್, ಡೆಂಗ್ಯೂ ಜ್ವರ, ಏನಿದರ ಲಕ್ಷಣ

Krishnaveni K

ಬುಧವಾರ, 22 ಮೇ 2024 (10:35 IST)
ಬೆಂಗಳೂರು: ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಲೇ ಇದೆ. ಇದರ ಬೆನ್ನಲ್ಲೇ ವೆಸ್ಟ್ ನೈಲ್, ಡೆಂಗ್ಯೂ ಜ್ವರ ಹಾವಳಿ ಹೆಚ್ಚಾಗಿದೆ. ಡೆಂಗ್ಯೂ ಜ್ವರದ ಬಗ್ಗೆ ನಾವು ಕೇಳಿಬರಬಹುದು. ವೆಸ್ಟ್ ನೈಲ್ ಜ್ವರವೆಂದರೇನು, ಅದರ ಲಕ್ಷಣಗಳೇನು ನೋಡೋಣ.

ಈಗಾಗಲೇ ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕ್ಯೂಲೆಕ್ಸ್ ಸೊಳ್ಳೆಗಳಿಂದ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ. ಈ ನಡುವೆ ಈಗ ಬೆಂಗಳೂರಿನಲ್ಲೂ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ. ಕೇರಳದಲ್ಲಿ ಈಗಾಗಲೇ ವೈರಲ್ ಜ್ವರದ ಪ್ರಕರಣಗಳು ವರದಿಯಾಗಿವೆ.

ಸಾಮಾನ್ಯ ಜ್ವರಕ್ಕೂ ವೆಸ್ಟ್ ನೈಲ್ ಜ್ವರಕ್ಕೂ ಕೊಂಚ ವ್ಯತ್ಯಾಸವಿದೆ. ಈ ಜ್ವರ ತೀವ್ರವಾಗಿ ಕಾಡುತ್ತದೆ ಮತ್ತು ವೈರಸ್ ಪೀಡಿತ ವ್ಯಕ್ತಿ ತೀವ್ರ ಅನಾರೋಗ್ಯಕ್ಕೊಳಗಾಗುತ್ತಾರೆ. ಆರಂಭದಲ್ಲಿ ಯಾವುದೇ ಲಕ್ಷಣ ಕಾಣುವುದಿಲ್ಲ. ಕ್ರಮೇಣ ತೀವ್ರ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತಾಗುವುದು ಇತ್ಯಾದಿ ಕಾಣಿಸಿಕೊಳ್ಳಬಹುದು. ಜ್ವರದ ತೀವ್ರತೆ ಹೆಚ್ಚಾದಂತೆ ಪಾರ್ಶ್ಚವಾಯು, ಕೋಮಾಗೆ ಹೋಗುವ ಸಾಧ್ಯತೆಯೂ ಇದೆ.

ಹೀಗಾಗಿ ಆದಷ್ಟು ಮನೆಯ ಸುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಆದಷ್ಟು ಸೊಳ್ಳೆ ಬತ್ತಿ ಅಥವಾ ಸೊಳ್ಳೆ ಮನೆಯೊಳಗೆ ಪ್ರವೇಶಿಸಿದಂತೆ ನೋಡಿಕೊಳ್ಳಿ. ಇನ್ನು, ಆದಷ್ಟು ಬಿಸಿ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಜ್ವರ ಬಾರದಂತೆ ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ