ನಟಿ ಶಿಲ್ಪಾ ಶೆಟ್ಟಿ 10 ಕೋಟಿ ಆಫರ್ ಗಾಗಿ ಮಾಡಿದ್ದೇನು?
ನಟಿ ಶಿಲ್ಪಾ ಶೆಟ್ಟಿ ಹತ್ತು ಕೋಟಿ ರೂಪಾಯಿ ಆಫರ್ ಗಾಗಿ ಈ ರೀತಿ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಈಗಾಗಲೇ ತಮ್ಮ ನಟನೆ ಹಾಗೂ ಯೋಗ ಅಲ್ಲದೇ ದೇಹ ಸೌಷ್ಟವದಿಂದಾಗಿ ಶಿಲ್ಪಾ ಶೆಟ್ಟಿ ಮನೆ ಮಾತಾಗಿದ್ದಾರೆ.
ಸ್ಲಿಮ್ ಆಗೋಕೆ ಅಂತ ಆಯುರ್ವೇದ ಕಂಪನಿಯೊಂದು ಟ್ಯಾಬ್ಲೆಟ್ ಸಿದ್ಧಪಡಿಸಿದೆ. ಇದನ್ನ ಪ್ರಚಾರ ಮಾಡೋಕೆ ಅಂತ ಶಿಲ್ಪಾ ಶೆಟ್ಟಿಗೆ ಆಯುರ್ವೇದಿಕ್ ಔಷಧ ತಯಾರಿಕೆ ಕಂಪನಿ ನಟಿ ಶಿಲ್ಪಾ ಶೆಟ್ಟಿಗೆ 10 ಕೋಟಿ ರೂಪಾಯಿ ಆಫರ್ ನೀಡಿದೆ.
ಆದರೆ ಈ ಆಫರ್ ನ್ನು ನಟಿ ಶಿಲ್ಪಾ ಶೆಟ್ಟಿ ತಿರಸ್ಕಾರ ಮಾಡಿದ್ದಾರೆ. ನನಗೆ ನಂಬಿಕೆ ಇಲ್ಲದ ಕೆಲಸವನ್ನ ನಾನು ಮಾಡೋದಿಲ್ಲ. ಹೀಗಂತ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.