ಬೇಗ ಮುಟ್ಟಾಗಲು ಇವುಗಳನ್ನು ಸೇವಿಸಿ

ಮಂಗಳವಾರ, 7 ಮೇ 2019 (08:07 IST)
ಬೆಂಗಳೂರು : ಹೆಣ್ಣುಮಕ್ಕಳಿಗೂ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಈ ಮುಟ್ಟಿನಿಂದ ಸಮಾರಂಭಗಳಿಗೆ ಹೋಗಲು ಸಮಸ್ಯೆಯಾಗುತ್ತದೆ. ಅದಕ್ಕಾಗಿ ಹೆಚ್ಚಿನವರು ಆರೋಗ್ಯಕ್ಕೆ ಹಾನಿಕಾರಕವಾದ ಟಾಬ್ಲೆಟ್ ನ್ನು ತೆಗೆದುಕೊಳ್ಳತ್ತಾರೆ. ಅದರ ಬದಲು ಇವುಗಳನ್ನು ಬಳಸಿ ಮುಟ್ಟು ಬೇಗ ಆಗುವಂತೆ ಮಾಡಿ.




ವಿಟಮಿನ್ ಸಿಯುಕ್ತ ಹಣ್ಣು ಮತ್ತು ತರಕಾರಿಗಳು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ . ಈ ಈಸ್ಟ್ರೊಜೆನ್ ಮಟ್ಟವು ಗರ್ಭಾಶಯದ ಕುಗ್ಗುವಿಕೆಗೆ ಕಾರಣವಾಗಿ ಬೇಗ ಮುಟ್ಟಾಗುವಂತೆ ಮಾಡುತ್ತದೆ.


ಅರಿಶಿಣ, ಗರ್ಭಾಶಯದಲ್ಲಿನ ರಕ್ತದ ಹರಿವನ್ನು ಉತ್ತೇಜಿಸಿ ಬೇಗ ಮುಟ್ಟಾಗಲು ಕಾರಣವಾಗುತ್ತದೆ. ಇದು ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ.


ಶುಂಠಿ  ಕೂಡ ಪೆಲ್ವಿಸ್ ಪ್ರದೇಶದಲ್ಲಿ ಉಷ್ಣತೆ ಹೆಚ್ಚಿಸಿ ಗರ್ಭಾಶಯದಲ್ಲಿನ ಸಂಕೋಚನವನ್ನುಂಟು ಮಾಡಿ ಮುಟ್ಟು ಆರಂಭವಾಗಲು ಕಾರಣವಾಗುತ್ತದೆ. ಮುಟ್ಟಿನ ನೋವು ಶಮನಕ್ಕೂ ಇದು ಸಹಕಾರಿ


ಬಿಸಿ ಮತ್ತು ಖಾರ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ನಿಮ್ಮ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ ಇದರಿಂದ ಗರ್ಭಾಶಯದ ಕುಗ್ಗುವಿಕೆಯಾಗಿ ಬೇಗ ಮುಟ್ಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ