ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗುಲ್ಬರ್ಗದಲ್ಲಿ ಸರಕಾರದ ವಿರುದ್ಧ ಚಾರ್ಜ್‍ಶೀಟ್ ಸಂಬಂಧ ಪತ್ರಿಕಾಗೋಷ್ಠಿ ಮಾಡಿದ್ದರು. ಅವರ ಕಾರಿನ ಮೇಲೆ ಮೊಟ್ಟೆ ಒಡೆದಿದ್ದಾರೆ. ಶಾಯಿಯನ್ನು ಕಾರಿನ ಮೇಲೆ ಹಾಕಿದ್ದಾರೆ. ಬಾ ನೋಡಿಕೊಳ್ತೇವೆ; ಮುಗಿಸ್ತೀವೆ ಎಂಬ ಆವಾಜ್ ಹಾಕಿದ್ದಾರೆ ಎಂದು ಆಕ್ಷೇಪಿಸಿದರು.