ಉ-ಕ ನೆರೆ ಸಂತ್ರಸ್ಥರಿಗೆ ಖಡಕ್ ರೊಟ್ಟಿ, ಚಪಾತಿ, ಚಟ್ನಿ ಪುಡಿ ಕಳಿಸೋದ್ಯಾರು?

ಗುರುವಾರ, 15 ಆಗಸ್ಟ್ 2019 (17:57 IST)
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ನೆರೆಯಿಂದ ಬಾಧಿತವಾಗಿದ್ದು ಸಾವಿರಾರು ಜನರು ಪ್ರವಾಹ ಸಂತ್ರಸ್ಥರಾಗಿದ್ದಾರೆ. ಈ ಜನರಿಗೆ ಹಲವೆಡೆಯಿಂದ ಪರಿಹಾರ, ಸಾಮಗ್ರಿಗಳನ್ನು ಕಳಿಸಲಾಗುತ್ತಿದೆ.

ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮಸ್ಥರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 3 ಸಾವಿರ ರೊಟ್ಟಿ, ಚಪಾತಿ, 45 ಪಾಕೇಟ್ ಅಕ್ಕಿ, ನೀರಿನ ಬಾಟಲ್, ಚಟ್ನಿ ಪುಡಿ, ತೊಗರಿ ಬೇಳೆ, ಕಾರದ ಪುಡಿ, ಸಂಬಾರದ ಪುಡಿ, 20 ಬಿಸ್ಕೇಟ್ ಬಾಕ್ಸ್,  1000 ಹೊಸ ಸೀರೆ, 150 ಬೆಡ್ ಶೀಟ್, ಜಮಕಾನ, ರಗ್ಗು, 100 ಚಾಪೆ, 100 ಟವಲ್, ಪಂಚೆ ಕಳಿಸಿದ್ದಾರೆ.

ಮಕ್ಕಳ ರಡಿಮೇಡ್ ಉಡುಪುಗಳು, ಜರ್ಕಿನ್ ಗಳು ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ವಿತರಿಸಲು ಖುದ್ದು ಗ್ರಾಮಸ್ಥರೇ ನೆರೆ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ