ಶಭಾಷ್ ಕರ್ನಾಟಕ ಪೊಲೀಸ್

ಗುರುವಾರ, 6 ಅಕ್ಟೋಬರ್ 2022 (14:42 IST)
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿರುವಂತ ಜಗದೀಶ್, ಹೊಯ್ಸಳದಲ್ಲಿ ವಾಹನದಲ್ಲಿ ಗಸ್ತಿನಲ್ಲಿದ್ದರು. ಹೀಗೆ ಕೆಲಸದಲ್ಲಿಯೇ ಹಂಪಿನಗರ ಬಳಿಯ ರೆಮ್ ಕೋ ಲೇಔಟ್ ಗೆ ತೆರಳಿದ್ದರು. ತಮ್ಮ ಹೊಯ್ಸಳ ವಾಹನದಿಂದ ಇಳಿದು ನಿಂತಿದ್ದಾಗಲೇ, ದಾರಿ ಹೋಕರೊಬ್ಬರು ಅವರ ಕಾರಿನ ಸಮೀಪವೇ ಬಿದ್ದಿದ್ದಂತ ಪರ್ಸ್ ಕಂಡು, ಸರ್ ನಿಮ್ಮ ಪರ್ಸ್ ಕೆಳಗೆ ಬಿದ್ದಿದೆ ನೋಡಿ. ತೆಗೆದುಕೊಳ್ಳಿ ಎಂದಿದ್ದಾರೆ.
 
ಅಚ್ಚರಿಯಿಂದ ಕೆಳಗೆ ನೋಡಿದಂತ ಎಎಸ್‌ಐ ಜಗದೀಶ್ ( ASI Jagadeesh ) ಅವರಿಗೆ ಅಲ್ಲೊಂದು ಪರ್ಸ್ ಸಿಕ್ಕಿದೆ. ಕೈಗೆತ್ತಿಕೊಂಡ ಅವರು, ಪರಿಶೀಲಿಸಿದಾಗ ಅಮೂಲ್ಯ ದಾಖಲೆಗಳಾದಂತ ಓರಿಜಿನಲ್ ಡ್ರೈವಿಂಗ್ ಲೈಸೆನ್ಸ್, ವೈದ್ಯರ ಐಡಿ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳಿದ್ದದ್ದು ಕಂಡು ಬಂದಿದೆ.
 
ಹೀಗೆ ಕೈಗೆ ಸಿಕ್ಕಂತ ಪರ್ಸ್ ನಲ್ಲಿನ ದಾಖಲೆಗಳಲ್ಲಿನ ವಿಳಾಸ ಯಲಹಂಕ ಪೊಲೀಸ್ ಠಾಣೆ ( Yelahanka Police Station ) ವ್ಯಾಪ್ತಿಯ ಜುಡೀಸಿಯಲ್ ಲೇಔಟ್ ವ್ಯಾಪ್ತಿಯದ್ದೆಂದು ತಿಳಿದು ಬಂದಿದೆ. ಆ ಕೂಡಲೇ ಯಲಹಂಕ ಪೊಲೀಸ್ ಠಾಣೆಗೆ ಕರೆ ಮಾಡಿದಂತ ಅವರು, ಡ್ರೈವಿಂಗ್ ಲೈಸೆನ್ಸ್ ನಲ್ಲಿದ್ದಂತ ವಿಳಾಸದಲ್ಲಿ ಪರ್ಸ್ ದೊರೆತಂತ ವೈದ್ಯರು ಇರುವರೇ ಎಂಬುದಾಗಿ ವಿಚಾರಿಸುವಂತೆ ಕೋರಿಕೊಂಡಿದ್ದಾರೆ.
 
ವೈದ್ಯೆಯಾಗಿ ವಿಜಯನಗರ ವ್ಯಾಪ್ತಿಯಲ್ಲಿನ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ನೀಡಿದ ಕಾರಣ, ನೇರವಾಗಿ ಅಲ್ಲಿಗೆ ತೆರಳಿ, ಡಾ.ಐಶ್ವರ್ಯ  ಅವರು ಕಳೆದುಕೊಂಡಿದ್ದಂತ ಪರ್ಸ್ ಹಾಗೂ ಅದರಲ್ಲಿದ್ದಂತ ಎಲ್ಲಾ ಒರಿಜಿನಲ್ ದಾಖಲೆಗಳನ್ನು  ಸೇಫ್ ಆಗಿ ಮರಳಿಸಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡಿದ್ದು ಅಕ್ಟೋಬರ್ 3, 2022ರಂದು ಒಂದೇ ದಿನದಲ್ಲಿ. ಇದಕ್ಕೆ ASC ಗಂಗರಾಜು ಕೂಡ ಜೊತೆಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ