ಮೋದಿ ಅಧಿಕಾರಕ್ಕೆ ಬಂದ್ರೆ ದೇಶ ಉಳಿಯುತ್ತೋ, ಇಲ್ವೋ? ಎಂದವರಾರು?
ಪ್ರಜಾಪ್ರಭುತ್ವ ಮಾತ್ರವಲ್ಲ ಸಂವಿಧಾನ, ಸಭ್ಯತೆ ಎಲ್ಲವೂ ಈಗ ಆತಂಕದಲ್ಲಿದೆ. ಈಗಿನವರೇ ಮತ್ತೇ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ, ಸಂವಿಧಾನ ಮಾತ್ರವಲ್ಲ ಈ ದೇಶವೇ ಉಳಿಯುತ್ಯೋ ಇಲ್ಲವೋ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುಪ್ರಿಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ ಭೂಷಣ ಹೇಳಿಕೆ ನೀಡಿದ್ದು, ಇಂದಿನ ಚುನಾವಣೆಯಲ್ಲಿ ಹಣವೇ ಹೆಚ್ಚಾಗಿದೆ. ಚುನಾವಣೆಗೆ ಓರ್ವ ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕು ಅಂತಾ ಮೀತಿ ಮಾಡಿದ್ದಾರೆ. ಆದರೆ ಪಕ್ಷಗಳಿಗೆ ಮೀತಿ ಇಲ್ಲ. ಈ ಸಲದ ಲೋಕಸಭೆ ಚುನಾವಣೆಯಲ್ಲಿ 1 ಲಕ್ಷ ಕೋಟಿ ಹಣ ವ್ಯಯ ಆಗಲಿದೆ. ಅದರಲ್ಲಿ ಶೇ. 90 ರಷ್ಟು ಬಿಜೆಪಿ ಮತ್ತು ಅವರ ಅಭ್ಯರ್ಥಿಗಳು ಖರ್ಚು ಮಾಡಲಿದ್ದಾರೆ ಎಂದರು.
ಕನ್ನಯ್ಯಕುಮಾರನಂತಹ ಅಭ್ಯರ್ಥಿಗಳು ಒಳ್ಳೆಯವರಿದ್ದರೂ ಅವರ ಬಳಿ ಹಣವೇ ಇಲ್ಲ ಎಂದೂ ಹೇಳಿದ್ರು.