ಬೀದರ್ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bidar loksabha election 2019 Live updates

[$--lok#2019#state#karnataka--$]
ಗಡಿ ಜಿಲ್ಲೆ ಬೀದರ್ ನಲ್ಲಿ 2019ರ ಲೋಕ ಸಮರದಲ್ಲಿ ಬಿಜೆಪಿ- ಕಾಂಗ್ರೆಸ್ ನೇರ ಪೈಪೋಟಿಯಲ್ಲಿದೆ. ಹಾಲಿ ಬಿಜೆಪಿ ಸಂಸದ ಭಗವಂತ ಖೂಬಾ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವೆ ಮೆಗಾಫೈಟ್ ನಡೆದಿದೆ. 
 
ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ ಕೊನೆ ಕ್ಷಣದಲ್ಲಿ ಕಮಲ ಪಾಳೆಯದ ಕೋಟೆಯಲ್ಲಿ ಕೈ ಪಡೆ ಅದೇ ಸಮುದಾಯಕ್ಕೆ ಸೇರಿದ ಖಂಡ್ರೆ ಅವರಿಗೆ ಮಣೆ ಹಾಕಿ ಗೆಲುವಿನ ಲೆಕ್ಕಾಚಾರದಲ್ಲಿದೆ. 
 
ಬಿಜೆಪಿಯ ಹಾಲಿ ಸಂಸದ ಭಗವಂತ ಖೂಬಾ ಅವರು 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ 92,222 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ಎನ್.ಧರ್ಮಸಿಂಗ್ ರನ್ನು ಸೋಲಿಸಿದ್ದರು. ಈ ಬಾರಿಯೂ ಗಡಿಯಲ್ಲಿ ಕಮಲ ಅರಳಿಸೋಕೆ ಮುಂದಾಗಿದ್ದಾರೆ. 
[$--lok#2019#constituency#karnataka--$]
ಬೀದರ್ ನಲ್ಲಿ ಒಟ್ಟು 17,73,912 ಮತದಾರರಿದ್ದು, ಅದರಲ್ಲಿ 9,18,595 ಪುರುಷರು ಮತ್ತು 8,55,214 ಮಹಿಳೆಯರಿದ್ದಾರೆ. 103 ಇತರೆ ಮತದಾರರು ಇಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ