ದಾವಣಗೆರೆ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Davanagere loksabha election 2019 Live updates

[$--lok#2019#state#karnataka--$]

ರುಚಿಕರ ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆಯಲ್ಲಿ 2019 ರ ಕದನ ಕುತೂಹಲ ಸ್ವಾರಸ್ಯಕರವಾಗಿದೆ. ಇಲ್ಲಿ ಬಿಜೆಪಿ-ಕಾಂಗ್ರೆಸ್, ಜೆಡಿಎಸ್ ನಡುವಿನ ಪೈಪೋಟಿ ಇದೆ. ಆದರೂ ಪೈಪೋಟಿ ಇದ್ರೂ ಅದರ ಪ್ರಭಾವ ಮಾತ್ರ ಕಡಿಮೆಯೇ.
 
ಪ್ರಧಾನಿ ನರೇಂದ್ರ ಮೋದಿ ಪ್ರಭಾವದಡಿ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನೆರಳಿನ ಅಭ್ಯರ್ಥಿ ಎನ್ನಲಾಗುತ್ತಿರುವ ಎಚ್.ಬಿ.ಮಂಜಪ್ಪ ಕಾಂಗ್ರೆಸ್ ನಿಂದ ಇಲ್ಲಿ ಎದುರಾಳಿಗಳು. 
 
2014ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ತಮ್ಮ ಎದುರಾಳಿ ಕಾಂಗ್ರೆಸ್ ನ ಎಸ್.ಎಸ್.ಮಲ್ಲಿಕಾರ್ಜುನರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
 
ಈ ಬಾರಿ ಶಾಮನೂರು ಶಿವಶಂಕರಪ್ಪ ಟಿಕೆಟ್ ನಿರಾಕರಿಸಿದ ಮೇಲೆ ಕೈ ಪಡೆಯಿಂದ ಮಂಜಪ್ಪ ಅವರಿಗೆ ನೀಡಲಾಗಿದೆ. 
 
ಬಿಜೆಪಿ ಭದ್ರಕೋಟೆ ಹಾಗೂ ಮೋದಿ ಹವಾ ಸಿದ್ದೇಶ್ವರ ನೆರವಿಗೆ ಇದ್ದರೆ, ಮಂಜಪ್ಪರಿಗೆ ಮೈತ್ರಿ ಪಕ್ಷಗಳ ಮುಖಂಡರೇ ಆಸರೆಯಾಗಿದ್ದಾರೆ. 
[$--lok#2019#constituency#karnataka--$]
ಒಟ್ಟು 16,11,965 ರಲ್ಲಿ 8,14,413 ಪುರುಷರು, 7,96,874 ಮಹಿಳೆಯರು ಮತ್ತು 110 ಇತರೆ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ