ದಸರಾ ಕ್ರೀಡಾಕೂಟ: ಶ್ರದ್ಧಾ ರಾಣಿಗೆ ಕ್ರೀಡಾ ರತ್ನ

ಮೂರು ದಿನಗಳ ದಸರಾ ಕ್ರೀಡಾಕೂಟ ಮೈಸೂರಿನಲ್ಲಿ ಮುಕ್ತಾಯವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರದ್ಧಾ ರಾಣಿ ಕ್ರೀಡಾ ರತ್ನ ಪ್ರಶಸ್ತಿ ಪಡೆದರು.

5000 ಮೀ (18: 42.6 ಸೆಕೆಂಡ್ಸ್) ಓಟದಲ್ಲಿ ಹೊಸ ದಾಖಲೆ ಸ್ಥಾಪಿಸುವುದರ ಮೂಲಕ ಬೆಳಗಾಂನ ತಿಪ್ಪವ್ವ ಸಣ್ಣಕ್ಕಿಯ ಹಳೆಯ ದಾಖಲೆಯನ್ನು (19:18:4 ಸೆಕೆಂಡ್) ಮುರಿದು ದಸರಾ ಕ್ರೀಡಾಕೂಟದಲ್ಲಿ ಅಪರಿಮಿತ ಸಾಧನೆಗೈದ ಪಟು ಎಂಬ ಕೀರ್ತಿಗೆ ಪಾತ್ರರಾದರು.

ದಸರಾ ಕ್ರೀಡೋತ್ಸವ ಸಮಿತಿ ಶ್ರದ್ಧಾ ರಾಣಿಯವರಿಗೆ ಕ್ರೀಡಾ ರತ್ನ ಪ್ರಶಸ್ತಿ ಕೊಟ್ಟು ಸನ್ಮಾನಿಸಿತು. ಮೈಸೂರು ವಿಭಾಗವು ಕ್ರೀಡೆಯ ಎಲ್ಲಾ ಕ್ಷೇತ್ರಗಳಲ್ಲೂ ಅತಿ ಹೆಚ್ಚು ಶ್ರೇಯಾಂಕ 361 ಪಡೆಯುವುದರ ಮೂಲಕ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಂಡಿತು.

ಈ ಬಾರಿಯ ಕ್ರೀಡಾ ಉತ್ಸವದಲ್ಲಿ ಮಹಿಳಾ ವಿಭಾಗದಲ್ಲಿ ಮೈಸೂರು 136 ಅಂಕಗಳನ್ನು ಪಡೆದು ಮೇಲುಗೈ ಸಾಧಿಸಿದರೆ ಪುರುಷರ ವಿಭಾಗದಲ್ಲಿ ಆ ಸ್ಥಾನ ಬೆಂಗಳೂರಿಗರ ಪಾಲಾಯಿತು.

ದಸರಾ ಕ್ರೀಡೆಯಲ್ಲಿ ವಿಜೇತರು

ಪುರುಷರು : 100 ಮೀ : ಜಮಾಲುದ್ದೀನ (ಮೈಸೂರು) 10.7 ಸೆ, ತ್ರಿಪಲ್ ಜಂಪ್ : ಮಂಜುನಾಥ್ ನಾಯಕ್ (ಬೆಳಗಾಂ) 13.13 ಮೀ, 4 ಷ 400 ಮೀ ರಿಲೇ : ಬೆಂಗಳೂರು ನಗರ (ಎನ್.ಎಮ್.ಆರ್. - 3.25.05 ಸೆ, ಹಳೆಯ ದಾಖಲೆ : 1998ರಲ್ಲಿ ಬೆಂಗಳೂರು ನಗರ - 3:26.2 ಸೆ), ಡಿಸ್ಕಸ್ ಥ್ರೌ : ಬಿ.ಸಿ. ರಾಜೀವ್ (ಬೆಂಗಳೂರು ಗ್ರಾಮಾಂತರ) 43.75 ಮೀ, 5000 : ಎಂ.ಡಿ. ಮಂಜುನಾಥ್ (ಮೈಸೂರು) 16:12.00 ಸೆ.

ಮಹಿಳೆಯರು : 5000 ಮೀ, ಶ್ರದ್ದಾ ರಾಣಿ ದೇಸಾಯಿ (ಬೆಂಗಳೂರು ಗ್ರಾಮಾಂತರ) ಎನ್.ಎಂ.ಆರ್. - 18:42.6 ಸೆ, ಹಳೆಯ ದಾಖಲೆ - (ಬೆಳಗಾಂನ ತಿಪ್ಪವ್ವ ಸಣ್ಣಕ್ಕಿಯ 18.4 ಸೆ), ತ್ರಿಪಲ್ ಜಂಪ್ : ಸುಮನ (ಮೈಸೂರು) 10:89 ಮೀ, 4 ಷ 400 ಮೀ ರಿಲೆ : ಮೈಸೂರು (4:09.6 ಸೆ), ಡಿಸ್ಕಸ್ ಥ್ರೌ : ಶ್ರೀಮಾ ಪ್ರಿಯದರ್ಶಿನಿ (ಮೈಸೂರು) 39.86 ಮೀ.

ವೆಬ್ದುನಿಯಾವನ್ನು ಓದಿ