33,000 ರೂ. ತಲುಪಿದ ಅಹಮದಾಬಾದ್ ವಿಮಾನಯಾನ ದರ
ಭಾರತ 2023ರ ಸೆಮೀಸ್ನಲ್ಲಿ ವೀರೋಚಿತ ಗೆಲುವು ದಾಖಲಿಸಿದೆ. ನ.19ರಂದು ಅಹಮದಾಬಾದ್ಲ್ಲಿ ಭಾರತ ಮತ್ತು ಆಸೀದ್ ನಡುವೆ ಫೈನಲ್ ನಡೆಯಲಿದೆ. ಈ ಹಿನ್ನಲೆ ಅಹಮದಾಬಾದ್ ಬಲು ದುಬಾರಿ ನಗರವಾಗಿ ಮಾರ್ಪಾಡಾಗಿದೆ. ವಿಶ್ವಕಪ್ ಪೈನಲ್ ಹಿನ್ನೆಲೆ, ವಿಮಾನ ಸಂಚಾರ, ಹೋಟೆಲ್, ಆಟೋ, ಟ್ಯಾಕ್ಸಿ ಎಲ್ಲದರ ಬೆಲೆ ಗಗನಮುಖಿ ಸಾಗಿದೆ.
ವಿಮಾನಯಾನದಲ್ಲಂತೂ, ಸರಿ ಸುಮಾರು 5700ರೂ ಇದ್ದ ಬೆಂಗಳೂರು ಅಹಮದಬಾದ್ ಏಕಮುಖ ವಿಮಾನ ಸಂಚಾರ ಇದೀಗ ಬರೋಬ್ಬರಿ 33000ಕ್ಕೆ ತಲುಪಿದೆ. ನ.18ರ ಸಂಜೆ ಬೆಂಗಳೂರಿನಿಂದ ಅಹಮದಾಬಾದ್ ತೆರಳುವ ವಿಮಾನದ ದರ ಇದಾಗಿದ್ದು, ನ 19ರ ಬೆಳಗ್ಗೆ ಹೊರಡುವ ವಿಮಾನದ ದರ ಕೂಡ 29000 ತಲುಪಿದೆ. ಅಲ್ಲದೇ ಹೋಟೇಲ್, ಹೋಂ ಸ್ಟೇ ದರಗಳು ಸುಮಾರು 300-400 ಪಟ್ಟು ದುಬಾರಿಯಾಗಿದೆ.