ತಾನು ನೀಡಿದ್ದ ಸಾಲ ಪಡೆಯಲು ಮನೆಗೆ ಬಂದ ಹುಡುಗಿಗೆ ಸಾಲಗಾರ ಮಾಡಿದ್ದೇನು ಗೊತ್ತಾ?

ಮಂಗಳವಾರ, 24 ನವೆಂಬರ್ 2020 (06:36 IST)
ಕೋಲ್ಕತ್ತಾ : ತಾನು ನೀಡಿದ್ದ ಸಾಲವನ್ನು ಸಂಗ್ರಹಿಸಲು ಮನೆಗೆ ಬಂದ 16 ವರ್ಷದ ಹುಡುಗಿಯ ಮೇಲೆ ಸಾಲಗಾರ ಮಾನಭಂಗ ಎಸಗಿದ ಘಟನೆ ಗೋಬಿಂದಾಪುರ ಕಾಲೋನಿ ಪ್ರದೇಶದಲ್ಲಿ ನಡೆದಿದೆ.

ಅಬೀರ್ ನಾಸ್ಕರ್  ಅಲಿಯಾಸ್ ನಾಂಟು ಈ ಕೃತ್ಯ ಎಸಗಿದ ಆರೋಪಿ. ಈತನಿಗೆ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯಳಾಗಿದ್ದು, ಇಬ್ಬರು ಭೇಟಿಯಾದ ವೇಳೆ ನಾಂಟು ಹುಡುಗಿಯಿಂದ 4ಸಾವಿರ ರೂ ಹಣವನ್ನು ಪಡೆದಿದ್ದಾನೆ. ಬಳಿಕ ಆತ ಅದನ್ನು ವಾಪಾಸು ನೀಡದಿದ್ದಾಗ ಹುಡುಗಿ ವಾಪಾಸು ನೀಡುವಂತೆ ಒತ್ತಡ ಹಾಕಿದ್ದಾಳೆ. ಹಾಗಾಗಿ ಹಣ ನೀಡುವುದಾಗಿ ಮನೆಗೆ ಕರೆದ ಆತ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ.

ಹುಡುಗಿ ಮನೆಗೆ ಬಂದು ಈ ವಿಚಾರ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಕಾರಣ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೇ ಆತ ಮೇಲೆ ಈ ಹಿಂದೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ