ರೈತರ ಮೇಲೆ ಲಘು ಲಾಠಿ ಪ್ರಹಾರ

geetha

ಬುಧವಾರ, 21 ಫೆಬ್ರವರಿ 2024 (18:32 IST)
ನವದೆಹಲಿ :ಸಿಂಗು ಗಡಿಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ರಸ್ತೆ ತಡೆ ನಡೆಸಲು ಯತ್ನಿಸಿದ ರೈತರ ಪ್ರಯತ್ನವನ್ನು ಪೊಲೀಸರು ಅಶ್ರುವಾಯು ದಾಳಿಯ ಮೂಲಕ ವಿಫಲಗೊಳಿಸಿದ್ದಾರೆ.ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪಂಜಾಬ್‌ ಮತ್ತು ಹರಿಯಾಣಾ ಗಡಿಯಲ್ಲಿ ರೈತರು ನಡೆಸುತ್ತಿರುವ ದೆಹಲಿ ಚಲೋ ಯಾತ್ರೆ ವಿಕೋಪಕ್ಕೆ ತಿರುಗಿದೆ. ಜೊತೆಗೆ ರೈತರ ಮೇಲೆ ಲಘು ಲಾಠಿ ಪ್ರಹಾರವನ್ನು ಸಹ ನಡೆಸಲಾಗಿದೆ. ಸುಮಾರು 14 ಸಾವಿರ ಜನ, 1200 ಟ್ರಾಕ್ಟರ್‌ ., 300 ಕಾರ್‌ ಗಳೊಂದಿಗೆ ದೆಹಲಿ ಚಲೋ ಯಾತ್ರೆ ನಡೆಯುತ್ತಿದ್ದು ಸಂಚಾರ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ಥಗೊಂಡಿದೆ.

ಹಿರಿಯನಾಗರಿಕರು ಮತ್ತು ಮಕ್ಕಳು ವಾಹನದಟ್ಟಣೆಯಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ. ಜೆಸಿಬಿ ಯಂತ್ರ ಬಳಸಿ ದೊಡ್ಡ ದೊಡ್ಡ ಕಾಂಕ್ರಿಟ್‌ ಬ್ಲಾಕ್‌ ಗಳನ್ನು ರಸ್ತೆ ಮಧ್ಯದಲ್ಲಿರಿಸಿ ರಸ್ತೆ ತಡೆ ನಡೆಸಲು ಪ್ರತಿಭಟನಾಕಾರರು ಯತ್ನಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ